ಬೆಂಗಳೂರಿನ ಕೆಲವೆಡೆ ಭಾರೀ ಮಳೆ: ಮನೆಗೆ ನುಗ್ಗಿದ ನೀರು

ಬೆಂಗಳೂರಿನ ಕೆಲವೆಡೆ ಭಾರೀ ಮಳೆ: ಮನೆಗೆ ನುಗ್ಗಿದ ನೀರು

YK   ¦    Oct 03, 2019 09:54:47 AM (IST)
ಬೆಂಗಳೂರಿನ ಕೆಲವೆಡೆ ಭಾರೀ ಮಳೆ: ಮನೆಗೆ ನುಗ್ಗಿದ ನೀರು

ಬೆಂಗಳೂರು: ಬುಧವಾರ ರಾತ್ರಿ ನಗರದ ಕೆಲವೆಡೆ ಸುರಿದ ಭಾರೀ ಮಳೆಯಿಂದಾಗಿ ಮನೆಯೊಳಗೆ ನೀರು ನುಗ್ಗಿ ಜನರು ಪರದಾಡುವಂತಾಯಿತು. ನೀರು ನಿಂತಿದ್ದರಿಂದ ಗುರುವಾರ ಬೆಳಿಗ್ಗೆಯಿಂದಲೇ ನಗರದ ಅಲ್ಲಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ಜನರು ವಾಹನ ಚಲಾಯಿಸಲು ಪರದಾಡಿದರು.

ಸಿ.ವಿ.ರಾಮ್ ನಗರ, ಎಚ್ ಎಸ್ ಆರ್ ಲೇಜೌಟ್, ಮಲ್ಲೇಶ್ವರಂ, ವಿಜಯನಗರ ಹಾಗೂ ಜಲಹಳ್ಳಿ ಪ್ರದೇಶಕ್ಕೆ ಮಳೆಯಿಂದಾಗಿ ಹೆಚ್ಚಿನ ಹಾನಿಯಾಗಿದೆ. ಬುಧವಾರ ರಾತ್ರಿ ೧೧.೩೦ಕ್ಕೆ ಪ್ರಾರಂಭವಾದ ಮಳೆ ಬೆಳಿಗ್ಗೆ ೪.೨೦ರ ವರೆಗೆ ನಿರಂತರವಾಗಿ ಸುರಿದಿದೆ. ಇಂದು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಯಲ್ಲೂ ಆಗಬಹುದು.