ರಾಜ್ಯದ ಜನ ಪ್ರತಿನಿಧಿಗಳಿಗೆ ಹೆಚ್ಚಿದ ಕೊರೋನಾ

ರಾಜ್ಯದ ಜನ ಪ್ರತಿನಿಧಿಗಳಿಗೆ ಹೆಚ್ಚಿದ ಕೊರೋನಾ

Keerthana Bhat   ¦    Sep 16, 2020 01:00:57 PM (IST)
ರಾಜ್ಯದ ಜನ ಪ್ರತಿನಿಧಿಗಳಿಗೆ ಹೆಚ್ಚಿದ ಕೊರೋನಾ

ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ಕೊರೋನಾಗೆ ಹೆಚ್ಚು ಹೆಚ್ಚು ಜನ ಪ್ರತಿನಿಧಿಗಳು ತುತ್ತಾಗುತ್ತಿದ್ದು, ಮಹಾಲಕ್ಷ್ಮೀ ಲೇಔಟ್‍ನ ಶಾಸಕ , ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ, ಮತ್ತು ತುಮಕೂರು ಗ್ರಾಮೀಣ ಶಾಸಕ ಸಿ ಗೌರಿ ಶಂಕರ್ ಅವರಿಗೆ ಕೋವಿಡ್ 19 ವರದಿ ಪಾಸಿಟಿವ್ ಬಂದಿದೆ.

ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಕೆ. ಗೋಪಾಲಯ್ಯ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆಪ್ತರ ಪ್ರಕಾರ ಸಚಿವರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರ ಪರೀಕ್ಷಾ ಫಲಿತಾಂಶ ಲಭ್ಯವಿಲ್ಲದ ಕಾರಣ ಮಂಗಳವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಭಾಗವಹಿಸಲಿಲ್ಲ.

ತುಮಕೂರು ಗ್ರಾಮೀಣ ಶಾಸಕ ಗೌರಿ ಶಂಕರ್ ಅವರಿಗೂ ಕೂಡ ಮಂಗಳವಾರ ಸಂಜೆ ಕೋವಿಡ್ ಇರುವುದು ದೃಢ ಪಟ್ಟಿದೆ. ಯಾವುದೇ ರೋಗಲಕ್ಷಣಗಳಿಲ್ಲದ ಕಾರಣ ಅವರು ತಮ್ಮ ನಿವಾಸದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.