ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಕನ್ನಡ ಸಂಘಟನೆ ಒತ್ತಾಯ

ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಕನ್ನಡ ಸಂಘಟನೆ ಒತ್ತಾಯ

YK   ¦    Nov 07, 2019 05:11:39 PM (IST)
ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಕನ್ನಡ ಸಂಘಟನೆ ಒತ್ತಾಯ

ಬೆಂಗಳೂರು: ಕನ್ನಡಗರಿಗೆ ಉದ್ಯೋಗ ಬೇಕೆ ಬೇಕು ಎಂದು ಡಾ.ಸರೋಜಿನಿ ಮಹಿಷಿ ವರದಿ ಜಾರಿ ಮಾಡುವಂತೆ ಕರ್ನಾಟಕ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.

ಕರ್ನಾಟಕದಲ್ಲಿನ ಉದ್ಯೋಗವಕಾಶಗಳಲ್ಲಿ ಸಿಂಹಪಾಲು ಸಹಜವಾಗಿ ಈ ನೆಲದ ಮಕ್ಕಳಿಗೆ ಸಿಗಬೇಕಿದೆ. ಕರ್ನಾಟಕ ಸರ್ಕಾರವೇ 1983ರಲ್ಲಿ ರಚಿಸಿದ ಡಾ.ಸರೋಜಿನಿ ಮಹಿಷಿ ಸಮಿತಿಯು ಕರ್ನಾಟಕದಲ್ಲಿನ ಎಲ್ಲ ಖಾಸಗಿ, ಸರ್ಕಾರಿ ವಲಯದ ಎಲ್ಲ ಹಂತಗಳ ಕೆಲಸಗಳಲ್ಲಿ ಕನ್ನಡಿಗರಿಗೆ ಆದ್ಯತೆ ಕೊಡಿಸುತ್ತದೆ.

ಈ ನಿಟ್ಟಿನಲ್ಲಿ ಕೂಡಲೇ ಸರೋಜಿನಿ ಮಹಿಷಿ ವರದಿಯನ್ನು ರಾಜ್ಯ ಸರ್ಕಾರ ಜಾರಿ ಮಾಡುವಂತೆ ಕನ್ನಡ ಸಂಘ ಒತ್ತಾಯಿಸಿದೆ.