ನೈಸರ್ಗಿಕ ವಿಕೋಪ ಉಪಶಮನ ನಿಧಿಯಡಿ ರಾಜ್ಯಕ್ಕೆ 1054 ಕೋಟಿ ಬಿಡುಗಡೆ: ಅಶೋಕ್

ನೈಸರ್ಗಿಕ ವಿಕೋಪ ಉಪಶಮನ ನಿಧಿಯಡಿ ರಾಜ್ಯಕ್ಕೆ 1054 ಕೋಟಿ ಬಿಡುಗಡೆ: ಅಶೋಕ್

HSA   ¦    May 22, 2020 03:49:13 PM (IST)
ನೈಸರ್ಗಿಕ ವಿಕೋಪ ಉಪಶಮನ ನಿಧಿಯಡಿ ರಾಜ್ಯಕ್ಕೆ 1054 ಕೋಟಿ ಬಿಡುಗಡೆ: ಅಶೋಕ್

ಬೆಂಗಳೂರು: ಕೇಂದ್ರ ಸರ್ಕಾರವು ರಾಜ್ಯಕ್ಕೆ ಮುಂಬರುವ ಮುಂಗಾರಿನ ಪ್ರವಾಹ, ಭೂಕುಸಿತ ಇತ್ಯಾದಿ ನಯಸರ್ಗಿಕ ವಿಕೋಪಗಳಿಗೆ 1054 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಟೀಯಲ್ಲಿ ಅವರು ಮಾತನಾಡಿ, ಈ ಬಗ್ಗೆ ಮಾಹಿತಿ ನೀಡಿದರು.

ರಾಜ್ಯ ನೈಸರ್ಗಿಕ ವಿಕೋಪ ಉಪಶಮನ ನಿಧಿ ಅಡಿಯಲ್ಲಿ ಈ ಹಣವನ್ನು ಪ್ರಧಾನಿ ಮೋದಿ ಅವರು ಬಿಡುಗಡೆ ಮಾಡಿರುವರು. ಮಳೆಗಾಲದಲ್ಲಿ ಯಾವುದೇ ರೀತಿಯ ಭೂಕುಸಿತ ಹಾಗೂ ಇನ್ನಿತರ ಪರಿಹಾರಗಳಿಗಾಗಿ ಇದನ್ನು ಬಿಡುಗಡೆ ಮಾಡಲಾಗಿದೆ ಎಂದರು.

ಮುಂದಾಲೋಚನೆಯಿಂದ ನಿಧಿ ಬಿಡುಗಡೆ ಮಾಡಿರುವಂತಹ ಪ್ರಧಾನಿ ಮೋದಿ ಅವರು ಅಭಿನಂದನೆಗೆ ಅರ್ಹರು ಎಂದು ಅಶೋಕ್ ಹೇಳಿದರು.