ಕೊರೋನಾ ಸಂಕಷ್ಟದಲ್ಲಿರುವವರಿಗಾಗಿ ಉಚಿತ ಅಪ್ಪಾಜಿ ಸಂಚಾರಿ ಕ್ಯಾಂಟೀನ್ ಆರಂಭ

ಕೊರೋನಾ ಸಂಕಷ್ಟದಲ್ಲಿರುವವರಿಗಾಗಿ ಉಚಿತ ಅಪ್ಪಾಜಿ ಸಂಚಾರಿ ಕ್ಯಾಂಟೀನ್ ಆರಂಭ

Ms   ¦    May 18, 2021 04:24:55 PM (IST)
ಕೊರೋನಾ ಸಂಕಷ್ಟದಲ್ಲಿರುವವರಿಗಾಗಿ ಉಚಿತ ಅಪ್ಪಾಜಿ ಸಂಚಾರಿ ಕ್ಯಾಂಟೀನ್ ಆರಂಭ

ಬೆಂಗಳೂರು: ಕೊರೋನಾ ಸಂಕಷ್ಟದಲ್ಲಿ ಒಂದೆಡೆ ಹಲವು ಮಂದಿ ಬೆಡ್ ಸಿಗದೆ ಒದ್ದಾಡುತ್ತಿದ್ದಾರೆ, ಇನ್ನೊಂದೆಡೆ ಹಸಿವಿನಿಂದ ತತ್ತರಿಸುತ್ತಿದ್ದಾರೆ. ಇಂತಹ ತೊಂದರೆಯಲ್ಲಿರುವವರಿಗೆ ಊಟದ ವ್ಯವಸ್ಥೆ ಮಾಡಲು ಮಾಜಿ ಪ್ರಧಾನ ಮಂತ್ರಿ ದೇವೇಗೌಡ ಅವರ ಹೆಸರಿನಲ್ಲಿ ಅಪ್ಪಾಜಿ ಸಂಚಾರಿ ಕ್ಯಾಂಟೀನ್ ಆರಂಭಿಸಲಾಗುತ್ತದೆ. 

 

 ಈ ಕ್ಯಾಂಟೀನ್ ನನ್ನು ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎ ಸರವಣ ಅವರು ಪ್ರಾರಂಭಿಸುತ್ತಿದ್ದು, ಉಚಿತವಾಗಿ ಊಟದ ಪ್ಯಾಕೇಟ್‌ಗಳನ್ನು ವಿತರಣೆ ಮಾಡಲು ಪ್ರಾರಂಭಿಸಿದ್ದಾರೆ. 

 

ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಕೆ.ಆರ್‌ ಮಾರುಕಟ್ಟೆ ಮೆಟ್ರೋ, ಸ್ಟೇಷನ್ ಬಳಿ ಈ ಕ್ಯಾಂಟಿನ್‌ಗೆ ಮೇ 17 ರಂದು ಚಾಲನೆ ನಿಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಹುಟ್ಟುಹಬ್ಬವನ್ನಿ ಆಚರಿಸಬಾರದು. ನೊಂದವರು, ಬಡವರಿಗೆ ನೆರವಾಗಬೇಕು ಎಂದು ಹೆಳಿದ್ದರು. ಅದರಂತೆ ಸಂಚಾರಿ ಕ್ಯಾಂಟೀನ್ ಮೂಲಕ ಮನೆ ಬಾಗಿಲಿಗೆ ಊಟದ ವ್ಯವಸ್ಥೆ ಒದಗಿಸಲಾಗುತ್ತಿದೆ ಎಂದು ಅವರು ಹೇಳುತ್ತಾರೆ.

 

ಕಳೆದ ನಾಲ್ಕು ವರ್ಷದಿಂದ ಹನುಮಂತನಗರದಲ್ಲಿ ಅಪ್ಪಾಜಿ ಕ್ಯಾಂಟೀನ್ ನಡೆಸಲಾಗುತ್ತಿದೆ. ಕಲೆದ ವರ್ಷ ಲಾಕ್‌ಡೌನ್ ವೇಳೆಯಲ್ಲಿ ಇದೇ ರೀತಿಯ ವ್ಯವಸ್ಥೆ ಒದಗಿಸಲಾಗಿತ್ತು. ಇದೀಗ ಸಂಚಾರಿ ಕ್ಯಾಂಟೀನ್ ಮೂಲಕ ಸೇವೆ ಒದಗಿಸುತ್ತಿದ್ದೇವೆ. ಅಗತ್ಯ ಇರುವವರು ಮೊದಲೇ ಬೇಡಿಕೆ ಸಲ್ಲಿಸಿದರೆ ಅಗತ್ಯಕ್ಕೆ ತಕ್ಕಂತೆ ಊಟ ಪೂರೈಸುತ್ತೇವೆ ಎಂದರು.