21ರಿಂದ ಪಿಯು ಕಾಲೇಜು ಉಪನ್ಯಾಸಕರಿಗೆ ದಸರಾ ರಜೆ

21ರಿಂದ ಪಿಯು ಕಾಲೇಜು ಉಪನ್ಯಾಸಕರಿಗೆ ದಸರಾ ರಜೆ

Y.K.   ¦    Oct 17, 2020 09:50:46 AM (IST)
21ರಿಂದ ಪಿಯು ಕಾಲೇಜು ಉಪನ್ಯಾಸಕರಿಗೆ ದಸರಾ ರಜೆ

ಬೆಂಗಳೂರು: ರಾಜ್ಯದ ಪಿಯು ಕಾಲೇಜುಗಳ ಉಪನ್ಯಾಸಕರಿಗೆ ಇದೇ 21ರಿಂದ ನ.1ರವರೆಗೆ ದಸರಾ ರಜೆ ಘೋಷಿಸಲಾಗಿದೆ ಎಂದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ತಿಳಿಸಿದ್ದಾರೆ.

ಪದವಿಪೂರ್ವ ಶಿಕ್ಷಣ ಉಪನ್ಯಾಸಕರಿಗೆ ರಜೆ ಘೋಷಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಶುಕ್ರವಾರ ಟ್ವೀಟ್‌ ಮೂಲಕ ತಿಳಿಸಿದರು.

ಪ್ರಾಥಮಿಕ ಮತ್ತು ಪ್ರೌಢಶಾಲೆ ಗಳ ಶಿಕ್ಷಕರಿಗೆ ಅ.12ರಿಂದ 30ರವರೆಗೆ ಮಧ್ಯಂತರ ರಜೆ ಘೋಷಿಸಿದ ನಂತರ, ದಸರಾ ರಜೆಗಾಗಿ ಉಪನ್ಯಾಸಕರು ಕೂಡ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಮೂರು ವಾರಗಳ ದಸರಾ ರಜೆನೀಡಿ, ಮನೆಯಿಂದಲೇ ಯೂಟ್ಯೂಬ್‌ ತರಗತಿಗಳನ್ನು ನಿರ್ವಹಿಸಲು ಅವಕಾಶ ನೀಡಬೇಕು ಎಂದು ಉಪನ್ಯಾಸಕರ ಸಂಘ ಕೋರಿತ್ತು.