ಗಾಂಜಾ ಖರೀದಿಗೆ 50 ರೂ. ನೀಡದಕ್ಕೆ ಪರಿಚಿತನ ಬರ್ಬರ ಕೊಲೆ

ಗಾಂಜಾ ಖರೀದಿಗೆ 50 ರೂ. ನೀಡದಕ್ಕೆ ಪರಿಚಿತನ ಬರ್ಬರ ಕೊಲೆ

YK   ¦    Nov 07, 2019 04:16:17 PM (IST)
 ಗಾಂಜಾ ಖರೀದಿಗೆ 50 ರೂ. ನೀಡದಕ್ಕೆ ಪರಿಚಿತನ ಬರ್ಬರ ಕೊಲೆ

ಬೆಂಗಳೂರು: ಗಾಂಜಾ ಖರೀದಿ ಮಾಡಲು ಹಣ ನೀಡದಕ್ಕೆ ಆರಂಭವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ದೇವರಜೀವನ ಹಳ್ಳಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಡಿ.ಜಿ. ಹಳ್ಳಿಯ ಮೋದಿ ರಸ್ತೆಯ ನಿವಾಸಿ ಸಯ್ಯದ್ ವಸೀಂ (19) ಹತ್ಯೆಯಾದ ಯುವಕ. ಪ್ರಕರಣಕ್ಕೆ ಸಂಬಂಧಿಸಿ, ಮೃತನ ಪರಿಚಿತ ಶಬೀರ್ (20) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗಾಂಜಾ ಖರೀದಿ ಮಾಡಲು ₹ 50 ಕೊಡುವಂತೆ ಮಂಗಳವಾರ ರಾತ್ರಿ ಸೈಯದ್‌ ವಸೀಂ ಬಳಿ ಶಬೀರ್ ಕೇಳಿದ್ದಾನೆ ಈ ವಿಷಯದಲ್ಲಿ ಇಬ್ಬರ ನಡುವೆ ಜಗಳವಾಗಿದೆ. ನಂತರ ಇದು ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.