ಲೋಕಸಭೆ ಮತ ಎಣಿಕೆ: 23ರಂದು ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿ

ಲೋಕಸಭೆ ಮತ ಎಣಿಕೆ: 23ರಂದು ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿ

YK   ¦    May 10, 2019 12:51:42 PM (IST)
ಲೋಕಸಭೆ ಮತ ಎಣಿಕೆ: 23ರಂದು ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿ

ಬೆಂಗಳೂರು: ಲೋಕಸಭೆ ಚುನಾವಣೆಯ 23ರಂದು ನಡೆಯುವ ಮತ ಎಣಿಕೆಯ ದಿನದಂದು ರಾಜಾದಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲು ರಾಜ್ಯ ಪೊಲೀಸ್ ಇಲಾಖೆ ಆದೇಶ ನೀಡಿದೆ.

ಮತ ಎಣಿಕೆಯ ದಿನದಂದು ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಈ ಮುನ್ನೆಚ್ಚರಿಕ ಕ್ರಮವನ್ನು ಕೈಗೊಳ್ಳಲು ತೀರ್ಮಾನಿಸುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನ್ನು ಹಮ್ಮಿಕೊಳ್ಳಲಾಗುವುದು ಎಂದರು.

ನಿಷೇಧಾಜ್ಞೆ ಜಾರಿಯಾದ ಸ್ಥಳದಲ್ಲಿ ನಿಯಮಾವಳಿಗಳ ಪ್ರಕಾರ ಸಂಭ್ರಮಾಚರಣೆಯನ್ನು ನಡೆಸಲು ನೀಡಲಾಗುವುದು ಎಂದು ಇಲಾಖೆ ಹೇಳಿದೆ.