ಕೊವಿಡ್-19 ನಿಯಂತ್ರಣ ಸಮಿತಿಗೆ ಆರ್. ಅಶೋಕ್ ನೇತೃತ್ವ

ಕೊವಿಡ್-19 ನಿಯಂತ್ರಣ ಸಮಿತಿಗೆ ಆರ್. ಅಶೋಕ್ ನೇತೃತ್ವ

HSA   ¦    Jun 27, 2020 02:49:39 PM (IST)
ಕೊವಿಡ್-19 ನಿಯಂತ್ರಣ ಸಮಿತಿಗೆ ಆರ್. ಅಶೋಕ್ ನೇತೃತ್ವ

ಬೆಂಗಳೂರು: ನಗರದಲ್ಲಿ ಕೊವಿಡ್-19 ಹರಡುವುದು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳಲು ರಚನೆಯಾಗಿರುವ ಸಮಿತಿಯ ನೇತೃತ್ವವನ್ನು ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ನೀಡಲಾಗಿದೆ.

ಅಶೋಕ್ ಅವರು ನಗರದಲ್ಲೇ ಇರುವ ಕಾರಣದಿಂದಾಗಿ ಅವರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದುಬಂದಿದೆ.

ಕೆಲವು ಪ್ರದೇಶಗಳಲ್ಲಿ ಸೀಲ್ ಡೌನ್ ಸಹಿತ ಪ್ರಮುಖ ನಿರ್ಧಾರಗಳನ್ನು ಅವರು ತೆಗೆದುಕೊಳ್ಳಲಿರುವರು.