ವೈದಕೀಯ ಸೀಟು ಹಂಚಿಕೆಯಲ್ಲಿ 1,100 ಕೋಟಿ ರೂಪಾಯಿ ಹಗರಣ: ಶಂಕರ್ ಬಿದರಿ ಆರೋಪ

ವೈದಕೀಯ ಸೀಟು ಹಂಚಿಕೆಯಲ್ಲಿ 1,100 ಕೋಟಿ ರೂಪಾಯಿ ಹಗರಣ: ಶಂಕರ್ ಬಿದರಿ ಆರೋಪ

HSA   ¦    Feb 14, 2020 03:01:27 PM (IST)
ವೈದಕೀಯ ಸೀಟು ಹಂಚಿಕೆಯಲ್ಲಿ 1,100 ಕೋಟಿ ರೂಪಾಯಿ ಹಗರಣ: ಶಂಕರ್ ಬಿದರಿ ಆರೋಪ

ಬೆಂಗಳೂರು: ಮಾಜಿ ಡಿಜಿ-ಐಜಿಪಿ ಶಂಕರ್ ಬಿದರಿ ಅವರು ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಒಂದು ಸಾವಿರದ ನೂರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ದೊಡ್ಡ ಬಾಂಬ್ ಸಿಡಿಸಿದ್ದಾರೆ.

ಸೀಟ್ ಬ್ಲಾಕ್ ಮಾಡುವುದೇ ಈ ಹಗರಣಕ್ಕೆ ಕಾರಣವಾಗಿದೆ ಎಂದು ದೂರಿರುವ ಬಿದರಿ ಅವರು, ರಾಜೀವ್ ಗಾಂಧಿ ಆರೋಗ್ಯ ವಿವಿ 2019 ಸಪ್ಟೆಂಬರ್ 28ರಂದು ಈ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು ಸೀಟ್ ಬ್ಲಾಕ್ ಮಾಡಿರುವ ಕಾರಣ 1100 ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಹೇಳಿತ್ತು. ಖಾಸಗಿ ಕಾಲೇಜುಗಳು ಸುಮಾರು 1100 ಕೋಟಿ ರೂಪಾಯಿ ಸಂಪಾದನೆ ಮಾಡಿವೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡಿರುವರು.

ರಾಜ್ಯ ಸರ್ಕಾರ ಮತ್ತು ಆದಾಯ ಇಲಾಖೆಯು ಏನು ಮಾಡುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಇದೇ ವೇಳೆ ಪ್ರಕರಣವನ್ನು ರಾಜಿಯಲ್ಲಿ ಮುಗಿಸಿ ಲಾಭ ಹಂಚಿಕೊಳ್ಳಲಾಗಿದೆಯಾ ಎಂದು ಕೂಡ ಪ್ರಶ್ನೆ ಮಾಡಿರುವರು.

ಈ ಬಗ್ಗೆ ರಾಜ್ಯ ಸರ್ಕಾರವು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಾಗಿದೆ.