ಬ್ಯಾಂಕ್ ಹಣದೊಂದಿಗೆ ಪರಾರಿಯಾದ ಚಾಲಕನ ಬಂಧನ

ಬ್ಯಾಂಕ್ ಹಣದೊಂದಿಗೆ ಪರಾರಿಯಾದ ಚಾಲಕನ ಬಂಧನ

Nov 29, 2016 12:23:18 PM (IST)

ಬೆಂಗಳೂರು: ಬ್ಯಾಂಕ್ ಹಣದೊಂದಿಗೆ ಚಾಲಕ ಪರಾರಿಯಾದ ಪ್ರಕರಣ ಸಂಬಂಧ ಉಪ್ಪಾರಪೇಟೆ ಪೊಲೀಸರು ಚಾಲಕ ಡಾಮ್ನಿಕ್ ರಾಯ್ನನ್ನ ಬಂಧಿಸಿದ್ದಾರೆ.

BOI ATM heist: Police nab van driver Dominic-1ಇದೇ ತಿಂಗಳು 23ರ ರಾತ್ರಿ 92 ಲಕ್ಷ ಹಣದೊಂದಿಗೆ ಡಾಮ್ನಿಕ್ ಪರಾರಿಯಾಗಿದ್ದ. ಬಳಿಕ ಹಣದೊಂದಿಗೆ ಚೆನ್ನೈನಲ್ಲಿರುವ ಎವಿಲಿನ್ ತಂಗಿ ಡಯಾನಾ ರಿಚಿ ಮನೆಗೆ ದಂಪತಿ ಹೋಗಿದ್ದರು. ಕದ್ದ ಹಣದಲ್ಲಿ ಸ್ವಲ್ಪ ಹಣ ಡಯಾನಾಗೂ ಕೊಟ್ಟಿದ್ದಾರೆ ಎನ್ನಲಾಗಿದೆ.

ಚಾಲಕ ಡಾಮ್ನಿಕ್ ಸ್ನೇಹಿತ ನೋಡಲು ಕೆಆರ್ ಪುರಂ ಟಿನ್ ಫ್ಯಾಕ್ಟರಿ ಬಳಿ ಬಂದಾಗ ಆತನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಚಾಲಕ ಡಾಮ್ನಿಕ್ ರಾಯ್ ಆಗಮನದ ಕುರಿತು ಖಚಿತ ಮಾಹಿತಿ  ಪಡೆದ ಪೊಲೀಸರು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿ ಚಾಲಕ ಡಾಮ್ನಿಕ್ ರಾಯ್ ನನ್ನು ಬಂಧಿಸಿದ್ದಾರೆ. ನಿನ್ನೆಯಷ್ಟೇ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಡಾಮ್ನಿಕ್ ಪತ್ನಿ ಎಲ್ವಿನ್ ಅವರನ್ನು ಬಂಧಿಸಿದ್ದರು. ನಗರದ  ಬಾಣಸವಾಡಿ ಮನೆಯೊಂದರಲ್ಲಿ ಇರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ರಾತ್ರಿ ದಿಢೀರ್ ದಾಳಿ ಮಾಡಿ ಪತ್ನಿ ಎಲ್ವಿನ್ ರನ್ನು ಬಂಧಿಸಿದ್ದರು.

ಪೊಲೀಸರು ನೀಡಿರುವ ಮಾಹಿತಿಯಂತೆ ಹಣ ಹೊತ್ತ ಪರಾರಿಯಾದ ಬಳಿಕ ಹಣದೊಂದಿಗೆ ಡೊಮ್ನಿಕ್ ರಾಯ್ ತನ್ನ ಪತ್ನಿ, ಮಗು ಜೊತೆ ಚಿತ್ತೂರು, ವೆಲ್ಲೂರು ಮಾರ್ಗವಾಗಿ ಚೆನ್ನೈ ಸೇರಿಕೊಂಡಿದ್ದ. ನವೆಂಬರ್ 23ರಂದು ರಾತ್ರಿ ಎಲ್ವಿನ್  ಮೇರಿ ತಂಗಿಯ ಮನೆಗೆ ತೆರಳಿದ್ದರು. ತಂಗಿ ಮತ್ತು ತಂಗಿ ಗಂಡನಿಗೆ ಎಲ್ಲಾ ವಿಷಯ ತಿಳಿಸಿದ್ದರು. ನವೆಂಬರ್ 24ರಂದು ಐವರು ತಮಿಳುನಾಡಿನ ಕೃಷ್ಣಗಿರಿಗೆ ತೆರಳಿದ್ದರು. ನಂತರ ಕೃಷ್ಣಗಿರಿಯಿಂದ ಕೊಯಮತ್ತೂರಿಗೆ ಪ್ರಯಾಣ  ಮಾಡಿದ್ದರು. ಅಲ್ಲಿಂದ ಕೊಯಮತ್ತೂರಿನಿಂದ ಕೃಷ್ಣಗಿರಿಗೆ ಬಂದಿದ್ದರು. ನವೆಂಬರ್ 25ರಂದು ಚರ್ಚ್ ನಲ್ಲಿ ದಂಪತಿ, ಮಗು ವಾಸವಿದ್ದರಂತೆ. ನವೆಂಬರ್ 26ರಂದು ಮತ್ತೆ ವಾಪಸ್ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಡೊಮ್ನಿಕ್ ಪತ್ನಿ ಕೈಗೆ 79.08 ಲಕ್ಷ ಕೊಟ್ಟು ಮನೆಗೆ ತೆರಳಲು ಸೂಚಿಸಿದ್ದ. ತಾನು ಹಿಂದೆಯೇ ಮನೆಗೆ ಬರುವುದಾಗಿ ಹೇಳಿದ್ದ. ಈ ಮಾಹಿತಿ  ತಿಳಿದ ಪೊಲೀಸರು ನಿನ್ನೆ ರಾತ್ರಿ ಡೋಮ್ನಿಕ್ ಪತ್ನಿಯನ್ನು ವಶಕ್ಕೆ ಪಡೆದಿದ್ದಾರೆ. ಆಕೆ ನೀಡಿದ ಮಾಹಿತ ಮೇರೆಗೆ ಇಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಇಂದು ಚಾಲಕ ಡಾಮ್ನಿಕ್ ನನ್ನು ಬಂಧಿಸಿದ್ದಾರೆ.