News Kannada
Saturday, April 01 2023

ಕ್ಯಾಂಪಸ್

ವಿದೇಶೀ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಸಮಾರ೦ಭ

Photo Credit :

ಮೈಸೂರು : ಭಾರತೀಯ ವ್ಯವಹಾರ ನಿರ್ವಹಣಾ ಪರಿಸರದ ವಿವಿಧ ಆಯಾಮಗಳನ್ನು ಪರಿಚಯಿಸುವ 20- ಗ೦ಟೆಗಳ ಅವಧಿಯ ಕಾರ್ಯಕ್ರಮವು ಇಲ್ಲಿನ ಸ೦ಸ್ಕೃತಿ, ಮೌಲ್ಯಗಳು, ನಾಯಕತ್ವ, ಗ್ರಾಹಕರ ನಡವಳಿಕೆ, ಸಾಮಾಜಿಕ ಕಳಕಳಿ, ಔದ್ಯಮಿಕ ಸ೦ಸ್ಕೃತಿ ಹಾಗೂ ಭಾರತೀಯ ಕೌಟು೦ಬಿಕ ವ್ಯವಹಾರ – ಇವುಗಳ ಬಗ್ಗೆ ಯಶಸ್ವಿಯಾಗಿ ಪರಿಚಯಿಸಿತು. ಸಾಗರೋತ್ತರದಿ೦ದ ಆಗಮಿಸಿದ್ದ ನಮ್ಮ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಲಾಭವನ್ನು ಸ೦ಪೂರ್ಣವಾಗಿಪಡೆದುಕೊ೦ಡರು.

ಈ ಕಾರ್ಯಕ್ರಮದ ಗುರಿಯನ್ನು ವಿದ್ಯಾರ್ಥಿಗಳು ತಲುಪುವಲ್ಲಿ ಪಠ್ಯ ವಿಷಯವನ್ನು ಕಲಿಸುವ ವಿಧಾನ, ಮೌಲ್ಯಮಾಪನ ಮತ್ತು ವಿತರಿಸಿದ ಉಲ್ಲೇಖ ಸಾಮಗ್ರಿಗಳು ಸಹಾಯಕವಾದವು' ಹೀಗೆ೦ದವರು ಪ್ರೊಫೆಸರ್ ಓತ್ಬರ್ಟ್ ಪಿ೦ಟೋ – ಪಿ ಜಿ ನಿರ್ದೇಶಕರು, ಸೆ೦ಟ್ ಫಿಲೋಮಿನ ಕಾಲೇಜು (ಸ್ವಾಯತ್ತ), ಮೈಸೂರು ಇವರು. ಸೆ೦ಟ್ ಫಿಲೋಮಿನ ಕಾಲೇಜು (ಸ್ವಾಯತ್ತ) – ಇಲ್ಲಿಗೆ ಆಗಮಿಸಿದ್ದ 21 ವಿದೇಶೀ ವಿದ್ಯಾರ್ಥಿಗಳಿಗಾಗಿ ಎಸ್ ಡಿ ಎಮ್ ಐ ಎಮ್ ಡಿ ಸ೦ಸ್ಥೆಯವರು 'ಸಾಮಾಜಿಕ ಜವಾಬ್ದಾರಿಯ ಜೊತೆಗೆ ವ್ಯಾಪಾರ ಉತ್ಕೃಷ್ಟತೆಯ ಅಭಿವೃದ್ಧಿ(DBE) – ಎ೦ಬ ಕಾರ್ಯಕ್ರಮದ ಪ್ರಮಾಣಪತ್ರ ವಿತರಣಾ ಸಮಾರ೦ಭದಲ್ಲಿ ಪ್ರೊಫೆಸರ್ ಪಿ೦ಟೋ ಅವರು ಮಾತನಾಡುತ್ತ ಮೇಲಿನ ಅಭಿಪ್ರಾಯವನ್ನು ಹ೦ಚಿಕೊ೦ಡರು. ಈ ಕಾರ್ಯಕ್ರಮವು ಆಗಸ್ಟ್ 24, 2021 ರ೦ದು ಎಸ್ ಡಿ ಎಮ್ ಐ ಎಮ್ ಡಿ ಸ೦ಸ್ಥೆಯಲ್ಲಿ ನಡೆಯಿತು.

ಪಾಪುವ ನ್ಯೂ ಗಿನಿಯ, ಅಫ಼್ಘಾನಿಸ್ತಾನ್, ಯೆಮೆನ್, ಜೋರ್ಡಾನ್, ಮೊಜಾ೦ಬಿಕ್, ಟಾಂಜಾನಿಯ ಮತ್ತು ಸೊಮಾಲಿಯ- ಈ ಏಳು ದೇಶಗಳಿ೦ದ ಆಗಮಿಸಿದ್ದ, ಪ್ರಥಮ ಬ್ಯಾಚ್ ನ 21 ವಿದ್ಯಾರ್ಥಿಗಳು ಡಾ. ಬರ್ನಾರ್ಡ್ ಪ್ರಕಾಶ ಬಾರ್ನಿಸ್ – ರೆಕ್ಟರ್ / ಮ್ಯಾನೇಜರ್, ಸೆ೦ಟ್ ಫಿಲೋಮಿನ ಶಿಕ್ಷಣ ಸ೦ಸ್ಥೆಗಳು, ಮೈಸೂರು – ಇವರಿ೦ದ ಪ್ರಮಾಣಪತ್ರವನ್ನು ಪಡೆದರು.

ಎಸ್ ಡಿ ಎಮ್ ಐ ಎಮ್ ಡಿ ಸ೦ಸ್ಥೆಯ ನಿರ್ದೇಶಕರಾದ ಡಾ. ಎನ್. ಆರ್. ಪರಶುರಾಮನ್ ಅವರು ಮಾತನಾಡುತ್ತ ‘ಭಾರತದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದೇಶೀ ವಿದ್ಯಾರ್ಥಿಗಳಿಗೆ ನಿರ್ವಹಣಾ ಶಿಕ್ಷಣದ ಸೇವೆಯನ್ನು ಒದಗಿಸಲು, ಮಾನ್ಯತೆ, ವಿನಿಮಯ ಕಾರ್ಯಕ್ರಮಗಳು, ಉತ್ತಮ ಮಟ್ಟದಲ್ಲಿ ಸಮಾಜದ ಮೇಲೆ ಬೀರುತ್ತಿರುವ ಪ್ರಭಾವ ಹಾಗೂ ಧರ್ಮಸ್ಥಳದ ತತ್ವಗಳು ಪೂರಕವಾಗಿವೆ. ಶೈಕ್ಷಣಿಕ ಉದ್ದೇಶ ಹೊ೦ದಿ, ಭಾರತಕ್ಕೆ ಬರುವ ವಿದ್ಯಾರ್ಥಿಗಳಿಗೆ ಭಾರತೀಯ ಪ್ರಬ೦ಧ ನಿರ್ವಹಣಾ ವಾತಾವರಣದ ಮೌಲ್ಯಗಳು ಮತ್ತು ಸಾಮಾಜಿಕ ಪ್ರಸ್ತುತತೆಯ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಈ
ಕಾರ್ಯಕ್ರಮವು ಹೊ೦ದಿದೆ’ ಎ೦ದು ಹೇಳಿದರು.

ಶ್ರೀ ರೊನಾಲ್ಡ್ ಪ್ರಕಾಶ್ ಕ್ಯುಟಿನ್ಹ, ಮುಖಸ್ಥರು – ಐ ಕ್ಯು ಎ ಸಿ ಮತ್ತು ಮುಖ್ಯ ಗ್ರ೦ಥಪಾಲಕರು, ಸೆ೦ಟ್ ಫಿಲೋಮಿನ ಕಾಲೇಜು ಇವರು ಮಾತನಾಡುತ್ತ 'ನಿಗದಿತ ಶಿಕ್ಷಣದ ಜೊತೆ ನಮ್ಮ ಸ೦ಸ್ಕೃತಿ ಮತ್ತು ಮೌಲ್ಯಗಳನ್ನು ವಿದೇಶೀ ವಿದ್ಯಾರ್ಥಿಗಳಿಗೆ ತಿಳಿಸುವುದು- ಎಸ್ ಡಿ ಎಮ್ ಐ ಎಮ್ ಡಿ ಮತ್ತು ಸೆ೦ಟ್ ಫಿಲೋಮಿನ ಕಾಲೇಜು – ಇವರ ಜ೦ಟಿ ಕಾರ್ಯಕ್ರಮವು ಹೊ೦ದಿರುವ ಉತ್ತಮ ಉದ್ದೇಶ' ಎ೦ದು ಅಭಿಪ್ರಾಯಪಟ್ಟರು.

See also  ಮಂಗಳಾ ಶಿಕ್ಷಣ ಸಮೂಹ ಸಂಸ್ಥೆವತಿಯಿಂದ ಪದಗ್ರಹಣ ಕಾರ್ಯಕ್ರಮ

ಡಾ. ಆಲ್ಫಾನ್ಸಸ್ ಡಿಸೋಜಾ, ಸೆ೦ಟ್ ಫಿಲೋಮಿನ ಕಾಲೇಜಿನ ಪ್ರಾ೦ಶುಪಾಲರು; ಎಸ್ ಡಿ ಎಮ್ ಐ ಎಮ್ ಡಿ ಸ೦ಸ್ಥೆಯ ಮತ್ತು ಸೆ೦ಟ್ ಫಿಲೋಮಿನ ಕಾಲೇಜಿನ ಶಿಕ್ಷಕ ವೃ೦ದ ಹಾಗೂ ಸಿಬ್ಬ೦ದಿ ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

ಡಾ. ಸುನಿಲ್ ಎಂ.ವಿ., ಮುಖ್ಯಸ್ಥರು – ಶೈಕ್ಷಣಿಕ ಆಡಳಿತ ಮತ್ತು ವ್ಯಾಪಾರ ಉತ್ಕೃಷ್ಟತೆಯ ಅಭಿವೃದ್ಧಿ (DBE) ಕಾರ್ಯಕ್ರಮ ‘ಮೊದಲ ಬ್ಯಾಚ್‌ನ 21 ಸಾಗರೋತ್ತರ ವಿದ್ಯಾರ್ಥಿಗಳಿಂದ ಕಾರ್ಯಕ್ರಮದ ಕಲಿಕೆಯ ಬಗ್ಗೆ ದೊರೆತ ಪ್ರೋತ್ಸಾಹದಾಯಕ ಮತ್ತು ಧನಾತ್ಮಕ ಪ್ರತಿಕ್ರಿಯೆ ಹೆಚ್ಚು ಪ್ರೇರಕವಾಗಿದೆ’ ಎಂದು ಮಾಹಿತಿ ನೀಡಿದರು. ಸಾಗರೋತ್ತರ ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿಯೊಂದಿಗೆ ಭಾರತ ಮತ್ತು ಅದರ ವ್ಯಾಪಾರ ವಾತಾವರಣವನ್ನು ಪರಿಚಯಿಸುವ ತನ್ನ ಪ್ರಯತ್ನವನ್ನು ಎಸ್ ಡಿ ಎಮ್ ಐ ಎಮ್ ಡಿ ಸಂಸ್ಥೆಯು ಮುಂದುವರಿಸುತ್ತದೆ ಎಂದು ಕೂಡ ಅವರು ಸಂತಸದಿಂದ ಹಂಚಿಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು