ಮಂಗಳೂರು:ಬ್ರಿಲಿಯಂಟ್ ಸಮೂಹ ವಿದ್ಯಾಸಂಸ್ಥೆಗಳ ಸಹಯೋಗದೊಂದಿಗೆ ಇತ್ತೀಚಿಗೆ ವಿದ್ಯಾರ್ಥಿಗಳ ಪೋಷಕರು ಹಾಗೂ ಅಧ್ಯಾಪಕರೊಂದಿಗೆ ಪ್ರಸ್ತುತ ಶೈಕ್ಷಣಿಕ ವರ್ಷದ ಸಮಾಲೋಚನಾ ಸಭೆಯು ಬ್ರಿಲಿಯಂಟ್ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಮಂಗಳೂರಿನ ಪ್ರಖ್ಯಾತ ನಿರ್ಮಾಣ ಸಂಸ್ಥೆ ಅಭೀಶ್ ಬಿಲ್ಡರ್ಸ್ ಆಡಳಿತ ನಿರ್ದೇಶಕರು ಹಾಗೂ ಸಿ ಆರ್ ಡಿಎಐ ಮಂಗಳೂರು ಅಧ್ಯಕ್ಷರಾದ ಪುಷ್ಪರಾಜ್ ಜೈನ್ ಮಾತನಾಡಿ “ಪಿಯುಸಿ ವಿದ್ಯಾಭ್ಯಾಸ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವುದು, ಪೋಷಕರ ಮತ್ತು ಅಧ್ಯಾಪಕರ ಪ್ರಮುಖ . ಕರ್ತವ್ಯವಾಗಿದ್ದು, ಹಿಂದಿನ ಮತ್ತು ಇಂದಿನ ವಿದ್ಯಾಭ್ಯಾಸ ವಿದ್ಯರ‍್ಥಿಗಳಲ್ಲಿ ಯಾವ ರೀತಿ ಪ್ರಭಾವ ಬೀರುತ್ತದೆ” ಎಂಬುದನ್ನು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಅನಿರ್ವೇಧ ರಿಸೊರ್ಸ್ ಸೆಂಟರ್ ಅಧ್ಯಕ್ಷರು ಮತ್ತು ಶಿವಮೊಗ್ಗ ಮಾನಸ ಆಸ್ಪತ್ರೆಯ ಮಾನಸಿಕ ತಜ್ಞರಾದ ಡಾ.ಕೆ.ಟಿ. ಶ್ವೇತಾ ಅವರು ಮಾತನಾಡಿ, “ವ್ಯಕ್ತಿ – ವ್ಯಕ್ತಿಗಳ ಮಾನಸಿಕ ವ್ಯತ್ಯಾಸ, ಅನುಭವ ಕೌಶಲ್ಯ, ದೈನಂದಿನ ಚಟುವಟಿಕೆಗಳಿಂದ ವ್ಯಕ್ತಿಗತ ಪ್ರಭಾವ, ಆಧುನಿಕ ಜೀವನದ ಶೈಲಿ, ಒತ್ತಡದಿಂದ ಆರೋಗ್ಯ ಮೇಲಿನ ದುಷ್ಪರಿಣಾಮ ಇತ್ಯಾದಿ ವಿಷಯಗಳ ಬಗ್ಗೆ ವಿಸ್ತ್ರುತ ವಿವರಣೆ ನೀಡಿದರು. ಮಾತ್ರವಲ್ಲದೆ, ಮಾನಸಿಕ ಸದೃಡತೆ ಜೀವನದ ಅವಿಭಾಜ್ಯ ಅಂಗವಾಗಬೇಕು”. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪೋಷಕರು ಅಧ್ಯಾಪಕರೊಂದಿಗೆ ಕೈ ಜೋಡಿಸುವುದು ಅನಿವರ‍್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬ್ರಿಲಿಯಂಟ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಸಿ.ಎ ರಾಮ್ ಮೋಹನ್ ರೈ ಮಾತನಾಡಿ “ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡರೆ ಮುಂದಿನ ಭವಿಷ್ಯ ಉತ್ತಮವಾಗುವುದು ಮಾತ್ರವಲ್ಲದೆ, ಜವಾಬ್ದಾರಿತ ಪ್ರಜೆಯಾಗಲು ಸಹಕಾರಿಯಾಗುವುದು” ಎಂದರು.
ಪ್ರಾಂಶುಪಾಲರಾದ ಡಾಟಟ ಬಿಂದುಸಾರ ಶೆಟ್ಟಿ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ನಿಯಮ, ಅಧ್ಯಯನ ವ್ಯವಸ್ಥೆ, ಪೋಷಕರ ಪಾತ್ರ, ಪರೀಕ್ಷಾ ತಯಾರಿ ಇತ್ಯಾದಿ ವಿಷಯದ ಬಗ್ಗೆ ವಿವರಣೆ ನೀಡಿದರು.
ಉಪನ್ಯಾಸಕ ನವೀನ್ ಅತಿಥಿಗಳನ್ನು ಸ್ವಾಗತಿಸಿ, ಉಪನ್ಯಾಸಕ ಶ್ರೀ ರಮೇಶ್ ಕಲ್ಲಡ್ಕ ಕಾರ್ಯಕ್ರಮದಲ್ಲಿ ವಂದಿಸಿದರು. ಇದೇ ಸಂದರ್ಭದಲ್ಲಿ ಪೋಷಕರ ಸಮಿತಿಯನ್ನು ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪನ್ಯಾಸಕಿ ಶ್ರೀಮತಿ ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಲಾಯಿತು.
ವಿದ್ಯಾರ್ಥಿ ಗಳಿಗೆ ಸರಿಯಾದ ಮಾರ್ಗದರ್ಶನ ನೀಡುವುದು, ಪೋಷಕರ ಮತ್ತು ಅಧ್ಯಾಪಕರ ಪ್ರಮುಖ ಕರ್ತವ್ಯ – ಪುಷ್ಪರಾಜ್ ಜೈನ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.