News Kannada
Saturday, October 01 2022

ತುಮಕೂರು

ತುಮಕೂರು: ಕರಾಮುವಿ ವಾರ್ಷಿಕ/ಸೆಮಿಸ್ಟರ್ ಪರೀಕ್ಷಾ ಶುಲ್ಕ ಪಾವತಿಸಲು ದಿನಾಂಕ ವಿಸ್ತರಣೆ - 1 min read

KRMV extends date for payment of annual/semester examination fee
Photo Credit :

ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2013-14 ರಿಂದ 2020-21ರ ವರೆಗೆ ಪ್ರವೇಶಾತಿ ಪಡೆದು ಅನುತ್ತೀರ್ಣರಾಗಿರುವ/ಪರೀಕ್ಷೆ ತೆಗೆದುಕೊಂಡಿಲ್ಲದ ವಿದ್ಯಾರ್ಥಿಗಳಿಗೆ ಹಾಗೂ 2021-22ನೇ (ಜುಲೈ ಆವೃತ್ತಿ) ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ಸ್ನಾತಕ(ಯುಜಿ ), ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ಸ್ನಾತಕೋತ್ತರ(ಪಿಜಿ) ಮತ್ತು ಪಿ.ಜಿ. ಡಿಪ್ಲೋಮಾ ಪ್ರೋಗ್ರಾಮ್ಸ್., ಡಿಪ್ಲೋಮಾ ಪ್ರೋಗ್ರಾಮ್ಸ್., ಸರ್ಟಿಫಿಕೇಟ್ ಕೋರ್ಸ್ಗಳ ಎಲ್ಲಾ ವಿದ್ಯಾರ್ಥಿಗಳು ವಾರ್ಷಿಕ/ಸೆಮಿಸ್ಟರ್ ಪರೀಕ್ಷೆಗಳಿಗೆ ಮತ್ತು 2021-22ನೇ (ಜನವರಿ ಆವೃತ್ತಿ) ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದ ಸಿ.ಬಿ.ಸಿ.ಎಸ್. ಕೋರ್ಸ್ಗಳ (ಬಿ.ಬಿ.ಎ/ಬಿ.ಸಿ.ಎ/ಬಿ.ಎಸ್ಸಿ./ಬಿ.ಎಸ್ಸಿ.(ಐ.ಟಿ)/ಎಂ.ಎ/ಎಂ.ಸಿ.ಜೆ., ಎಂ.ಕಾಂ/ಎಂ.ಎಸ್ಸಿ./ಎಂ.ಬಿ.ಎ) ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆಗಳಿಗೆ ಆನ್ಲೈನ್ ಮುಖಾಂತರ ಪರೀಕ್ಷಾ ಶುಲ್ಕ ಪಾವತಿಸಲು ಅಧಿಸೂಚನೆ ಹೊರಡಿಸಲಾಗಿದೆ.

ವಿದ್ಯಾರ್ಥಿಗಳು ವಿವಿಯ ಅಧಿಕೃತ ವೆಬ್‌ಸೈಟ್ http://ksouportal.com/views/ExamHome.aspx ನ ಮೂಲಕ ಪರೀಕ್ಷಾ ಶುಲ್ಕವನ್ನು ಕಡ್ಡಾಯವಾಗಿ ಅಂತರ್ಜಾಲದ (ಆನ್ಲೈನ್) ಮೂಲಕ ಮಾತ್ರ ಪಾವತಿಸುವುದು. ಪರೀಕ್ಷಾ ಶುಲ್ಕ ಪಾವತಿಸಲು ದಂಡ ಶುಲ್ಕವಿಲ್ಲದೆ 25/08/2022 ಹಾಗೂ 200ರೂ ದಂಡ ಶುಲ್ಕದೊಂದಿಗೆ 05/09/2022 ಕಡೆಯ ದಿನಾಂಕವಾಗಿರುತ್ತದೆ. ಮುಂದುವರೆದು ಪರೀಕ್ಷಾ ವೇಳಾಪಟ್ಟಿಯನ್ನು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್ www.ksoumysuru.ac.in ನಲ್ಲಿ ಪ್ರಕಟಿಸಲಾಗಿದೆ ಎಂದು ಪ್ರಾದೇಶಿಕ ನಿರ್ದೇಶಕರಾದ ಡಾ. ಲೋಕೇಶ. ಆರ್ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ವಿವರಗಳಿಗಾಗಿ ಪ್ರಾದೇಶಿಕ ನಿರ್ದೇಶಕರು, ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರ, ಸಿಎ-07, ಟೂಡಾ ಲೇಔಟ್, ರಾಜೀವ್‌ಗಾಂಧಿ ನಗರ, ಮೆಳೆಕೋಟೆ, ತುಮಕೂರು-572105 ದೂರವಾಣಿ ಸಂಖ್ಯೆ- 0816-2955580, 9844506629, 9886112434, 7349474339 ಅನ್ನು ಸಂಪರ್ಕಿಸಬಹುದಾಗಿದೆ.

See also  ತುಮಕೂರಿನಲ್ಲಿ ಭೀಕರ ರಸ್ತೆ ಅಪಘಾತ : ಇಬ್ಬರ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11671
Media Release

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು