ಮುಂಬೈ: ರಾಜಸ್ಥಾನದ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ (ಬಿಐಟಿಎಸ್) ಈ ವರ್ಷದಿಂದ ಗ್ರೇಟರ್ ಮುಂಬೈನಲ್ಲಿ ಕಾನೂನು ಶಿಕ್ಷಣ ಸಂಬಂಧಿ ಕೋರ್ಸ್‌ಗಳನ್ನು ಆರಂಭಿಸಿಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಪ್ರಖ್ಯಾತ ವಾಸ್ತುಶಿಲ್ಪಿ ಹಫೀಜ್ ಅವರು ವಿನ್ಯಾಸ ಮಾಡಿರುವ ಶೂನ್ಯ-ಕಾರ್ಬನ್ ಕ್ಯಾಂಪಸ್ ನಲ್ಲಿ ಶಿಕ್ಷಣ ಸಂಸ್ಥೆ ಆರಂಭಗೊಳ್ಳಲಿದೆ. ಸಂಸ್ಥೆ 63-ಎಕರೆ ಪ್ರದೇಶದಲ್ಲಿದ್ದು, 1,500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ತಂತ್ರಜ್ಞಾನ ಮತ್ತು ಮಾಧ್ಯಮ ಕಾನೂನು, ಮನರಂಜನೆ ಮತ್ತು ಕ್ರೀಡಾ ಕಾನೂನು; ಕಾರ್ಪೊರೇಟ್ ಮತ್ತು ಹಣಕಾಸು ಕಾನೂನು; ಮತ್ತು ಪರ್ಯಾಯ ವಿವಾದ ಪರಿಹಾರ ಮತ್ತು ಮಧ್ಯಸ್ಥಿಕೆ ಸೇರಿದಂತೆ ಕಾನೂನು ವಿಷಯದ ಎಲ್ಲ ವಿಭಾಗಗಳ ಅಧ್ಯಯನಕ್ಕೆ ಅವಕಾಶವಿದೆ.
ಆಗಸ್ಟ್ 2023 ರಿಂದ,ಬಿ ಇ ಟಿ ಎಸ್ಕಾನೂನು ಶಾಲೆಯು ಐದು-ವರ್ಷದ ಸಮಗ್ರ ಪದವಿ ಕಾರ್ಯಕ್ರಮಗಳನ್ನು ಆರಂಭಿಸಲಿದೆ. ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷ ಮತ್ತು ಬಿಐಟಿಎಸ್ ಪಿಲಾನಿಯ ಚಾನ್ಸೆಲರ್ ಕುಮಾರ್ ಮಂಗಲಂ ಬಿರ್ಲಾ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಯುವಜನರ ಆಕಾಂಕ್ಷೆಗಳಿಂದ ಪ್ರೇರಿತವಾದ ಸ್ಥಳೀಯ ಮತ್ತು ಜಾಗತಿಕ ಪ್ರಾಮುಖ್ಯತೆ ಸಮಕಾಲೀನ ಮತ್ತು ಉದಯೋನ್ಮುಖ ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಬಿಟ್ಸ್ ಕಾನೂನು ಶಾಲೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.