ಚಿಕ್ಕಮಗಳೂರು: ಸೇಂಟ್ ಮೇರಿಸ್ ಐ.ಎಸ್.ಸಿ ಕಾಲೇಜಿನ ವಿದ್ಯಾರ್ಥಿ ಮಿಥಾಲಿ ಲೂನಾ ವತ್ ಹಾಗೂ ಸಮಯ್ ಮಲ್ಲೇಶ್ ಅವರಿಗೆ ಸೇಂಟ್ ಮೇರಿಸ್ ಇಂಟರ್ನ್ಯಾಷನಲ್ ಶಾಲೆಯ ಸ್ಟಡಿ ಅಬ್ರಾಡ್ ಯೋಜನೆಯ ಅಡಿಯಲ್ಲಿ ೧.೫ ಕೋಟಿ ಹಾಗೂ ೮೬ ಲಕ್ಷ ವಿದ್ಯಾರ್ಥಿ ವೇತನಗಳಿಸುವುದರ ಮೂಲಕ ಅಮೇರಿಕಾದ ಪ್ರತಿಷ್ಟಿತ ಯುನಿವರ್ಸಿಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಆಯ್ಕೆಗೊಂಡಿರುತ್ತಾರೆ.
ಅತ್ಯುತ್ತಮವಾದ ಸಾಧನೆಗೆ ಸೇಂಟ್ ಮೇರಿಸ್ ಇಂಟರ್ನ್ಯಾಷನಲ್ ಶಾಲೆಯ ಸಂಸ್ಥಾಪಕ ಜೆರಾಲ್ಡ್ ಲೋಬೊ ಹಾಗೂ ಆಡಳಿತ ವರ್ಗದವರು ಹಾಗೂ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಮಿಥಾಲಿ ಲೂನಾವತ್ ಅವರು ನಗರದ ವಾಸಿ ಸುಶೀಲ್ ಕುಮಾರ್ ಲೂನಾವತ್ ಹಾಗೂ ಅನುಪಮಾ ದೇವಿ ಲೂನಾವತ್ ದಂಪತಿಯ ಪುತ್ರಿ ಹಾಗೂ ಸಮಯ್ ಮಲ್ಲೇಶ್ ಅವರು ಬಿ.ಎನ್.ಮಲ್ಲೇಶ್ ಹಾಗೂ ತಾಯಿ ಆಶಾ ರವರ ಪುತ್ರರಾಗಿದ್ದಾನೆ.