ನಟಿ ಖುಷ್ಬೂ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ

ನಟಿ ಖುಷ್ಬೂ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ

Y.K.   ¦    Oct 12, 2020 01:01:22 PM (IST)
ನಟಿ ಖುಷ್ಬೂ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ

ಚೆನ್ನೈ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರರಾದ ಖುಷ್ಬೂ ಸುಂದರ್ ಸೋಮವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಪಕ್ಷದಲ್ಲಿನ ಕೆಲವು ಮುಖಂಡರ ನಿರ್ಧಾರಗಳನ್ನು ಹೇರುವ ಹಾಗೂ ತಮ್ಮನ್ನು ನಿಗ್ರಹಿಸುವ ಧೋರಣೆಯನ್ನು ಪ್ರತಿಭಟಿಸಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಖುಷ್ಬೂ ಅವರು ಬಿಜೆಪಿಗೆ ಸೇರಬಹುದು ಎಂಬ ಬಗ್ಗೆ ದಟ್ಟ ವದಂತಿಗಳಿವೆ.

ಈ ಮಧ್ಯೆ, ಪಕ್ಷದ ವಕ್ತಾರ ಸ್ಥಾನದಿಂದ ಖುಷ್ಬೂ ಸುಂದರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ತೆಗೆಯಲಾಗಿದೆ ಎಂದು ಕಾಂಗ್ರೆಸ್ ಪಕ್ಷವು ದೆಹಲಿಯಲ್ಲಿ ಪ್ರಕಟಿಸಿದೆ.

ಪ್ರಸಿದ್ಧ ನಟಿಯೂ ಆಗಿದ್ದ ಖುಷ್ಬೂ ಅವರು ಕಾಂಗ್ರೆಸ್ ಸೇರುವ ಮೊದಲು ಡಿಎಂಕೆ ಪಕ್ಷದಲ್ಲಿದ್ದರು. ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಕಳುಹಿಸಿದ್ದಾರೆ.