ಗಂಡು ಮಗುವಿನ ತಾಯಿಯಾದ ನಟಿ ಶ್ವೇತಾ ಚಂಗಪ್ಪ

ಗಂಡು ಮಗುವಿನ ತಾಯಿಯಾದ ನಟಿ ಶ್ವೇತಾ ಚಂಗಪ್ಪ

YK   ¦    Sep 10, 2019 10:22:20 AM (IST)
ಗಂಡು ಮಗುವಿನ ತಾಯಿಯಾದ ನಟಿ ಶ್ವೇತಾ ಚಂಗಪ್ಪ

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾ ಟಾಕೀಸ್ ಖ್ಯಾತಿಯ ಶ್ವೇತಾ ಚಂಗಪ್ಪ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ವಿಚಾರವನ್ನು ಶ್ವೇತಾ ಅವರೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಮೂಲತಃ ಕೊಡಗಿನವರಾದ ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ವಿವಾಹವಾಗಿದ್ದರು.

ಕಿರುತೆರೆ ಹಾಗೂ ಸಿನಿಮಾ ರಂಗದಲ್ಲೂ ತೊಡಗಿಸಿಕೊಂಡಿದ್ದರು. ಆದರೇ ಅವರಿಗೆ ಹೆಚ್ಚು ಖ್ಯಾತಿ ಕೊಟ್ಟ ಪಾತ್ರವೆಂದರೆ ಮಜಾ ಟಾಕೀಸ್ ನ ರಾಣಿ ಪಾತ್ರ.