ರೇವತಿ ಜತೆಗಿದ್ದ ಮೊದಲ ಫೋಟೋ ಶೇರ್ ಮಾಡಿದ ನಿಖಿಲ್

ರೇವತಿ ಜತೆಗಿದ್ದ ಮೊದಲ ಫೋಟೋ ಶೇರ್ ಮಾಡಿದ ನಿಖಿಲ್

YK   ¦    Feb 07, 2020 11:44:28 AM (IST)
ರೇವತಿ ಜತೆಗಿದ್ದ ಮೊದಲ ಫೋಟೋ ಶೇರ್ ಮಾಡಿದ ನಿಖಿಲ್

ಬೆಂಗಳೂರು: ನಟ, ರಾಜಕಾರಣಿ ನಿಖಿಲ್ ಕುಮಾರಸ್ ಸ್ವಾಮಿ ತಮ್ಮ ಬಾಳ ಸಂಗಾತಿಯಾಗುವ ರೇವತಿ ಜತೆಗೆ ತೆಗೆಸಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ನನ್ನ ಮೇಲಿದ್ದ ಪ್ರೀತಿ ಮತ್ತು ಹಾರೈಕೆ ಇನ್ನು ಮುಂದೆ ನಮ್ಮೇಲೆ ಇರಲಿ ಎಂದು ಬರೆದುಕೊಂಡಿದ್ದಾರೆ. 


ಇದೇ ತಿಂಗಳ 10ರಂದು ನಿಖಿಲ್ ಹಾಗೂ ರೇವತಿ ನಿಶ್ಚಿತಾರ್ಥ ನಿಗದಿಯಾಗಿದ್ದು ಏಫ್ರಿಲ್ ತಿಂಗಳಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಮೂಲಗಳ ಪ್ರಕಾರ ಈಗಾಗಲೇ ಮದುವೆ ತಯಾರಿ ಶುರುವಾಗಿದ್ದು, ಮಾಜಿ ಸಿಎಂ, ಶಾಸಕ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ವಿವಾಹಕ್ಕಾಗಿ ಚನ್ನಪಟ್ಟಣ-ರಾಮನಗರ ನಡುವೆ ಜಾಗದ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.