ತುಂಬು ಗರ್ಭಿಣಿ ಸಮೀರಾ ರೆಡ್ಡಿ ಅಂಡರ್ ವಾಟರ್ ಫೋಟೋ ಶೂಟ್

ತುಂಬು ಗರ್ಭಿಣಿ ಸಮೀರಾ ರೆಡ್ಡಿ ಅಂಡರ್ ವಾಟರ್ ಫೋಟೋ ಶೂಟ್

YK   ¦    Jul 04, 2019 05:01:41 PM (IST)
ತುಂಬು ಗರ್ಭಿಣಿ ಸಮೀರಾ ರೆಡ್ಡಿ ಅಂಡರ್ ವಾಟರ್ ಫೋಟೋ ಶೂಟ್

ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್- ಟಾಲಿವುಡ್ ನಟಿ ಸಮೀರಾ ರೆಡ್ಡಿ ಈಚೆಗೆ ಅಂಡರ್ ವಾಟರ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ಈಜುಕೊಳದ ತಳಭಾಗದಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿರುವ ಸಮೀರಾ ರೆಡ್ಡಿ ಆ ಎಲ್ಲ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಈಚೆಗೆ ತಮ್ಮ ದೇಹದ ಬಗ್ಗೆ ಕಾಮೆಂಟ್ ಮಾಡಿದ ನೆಟ್ಟಿಗರ ವಿರುದ್ಧ ಮಾತನಾಡಿದ ಸಮೀರಾ ‘ ಮದುವೆಯಾಗಿ, ಮಕ್ಕಳನ್ನು ಹಡೆದ ಬಳಿಕ ಎಲ್ಲರೂ ಸಿನಿಮಾ ತಾರೆ ಕರೀನಾ ಕಫೂರ್ ಅವರಂತೆ ತೆಳ್ಳಗೆ ಬಳುಕುವ  ಬಳ್ಳಿಯಂತೆ ಇರಲ್ಲ’ಎಂದು ಕಾಮೆಂಟ್ ಮಾಡಿದ್ದರು.

 ವರದನಾಯಕ ಚಿತ್ರದಲ್ಲಿ ಕಿಚ್ಚ ಸುದೀಪ್ ಗೆ ಜೋಡಿಯಾಗಿ ನಟಿಸಿದ್ದ ಸಮೀರಾ ಹೆಚ್ಚಾಗಿ ಹಿಂದಿ ಹಾಗೂ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಸ್ಯಾಂಡಲ್ ವುಡ್

More Images