ನಟನೆಯಿಂದ ಕೆಲಕಾಲ ದೂರ ಉಳಿಯಲು ಸಂಜಯ್ ದತ್ ನಿರ್ಧಾರ

ನಟನೆಯಿಂದ ಕೆಲಕಾಲ ದೂರ ಉಳಿಯಲು ಸಂಜಯ್ ದತ್ ನಿರ್ಧಾರ

HSA   ¦    Aug 11, 2020 08:25:00 PM (IST)
ನಟನೆಯಿಂದ ಕೆಲಕಾಲ ದೂರ ಉಳಿಯಲು ಸಂಜಯ್ ದತ್ ನಿರ್ಧಾರ

ಮುಂಬಯಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಂಜಯ್ ದತ್ ಅವರು ಸ್ವಲ್ಪ ಕಾಲ ನಟನೆಯಿಂದ ವಿಶ್ರಾಂತಿ ಪಡೆಯಲು ನಿರ್ಧರಿಸಿರುವರು.

ಈ ಬಗ್ಗೆ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿರುವರು. ಉಸಿರಾಟದ ಸಮಸ್ಯೆಯಿಂದಾಗಿ ಸಂಜಯ್ ದತ್ ಅವರು ಕಳೆದ ವಾರ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಅವರು ಡಿಸ್ಚಾರ್ಜ್ ಆಗಿದ್ದರು.

ಶೀಘ್ರದಲ್ಲೇ ನಟನೆಗೆ ಮರಳುತ್ತೇನೆ. ಜನರ ಪ್ರೀತಿ ಹಾಗೂ ಸಹಕಾರ ಹೀಗೆ ಇರಲಿ ಎಂದು ಟ್ವೀಟ್ ಮಾಡಿರುವರು.