ನಿರ್ದೇಶಕ ಹ್ಯಾರಿಸ್ ಸಾವಿನ ಸುತ್ತ ಸಂಶಯದ ಹುತ್ತ: ಮರು ತನಿಖೆಗೆ ದೂರು

ನಿರ್ದೇಶಕ ಹ್ಯಾರಿಸ್ ಸಾವಿನ ಸುತ್ತ ಸಂಶಯದ ಹುತ್ತ: ಮರು ತನಿಖೆಗೆ ದೂರು

DSK   ¦    Aug 10, 2019 10:00:01 AM (IST)
ನಿರ್ದೇಶಕ ಹ್ಯಾರಿಸ್ ಸಾವಿನ ಸುತ್ತ ಸಂಶಯದ ಹುತ್ತ: ಮರು ತನಿಖೆಗೆ ದೂರು

ಮೂಡುಬಿದಿರೆ: ಕಳೆದ ಮಾರ್ಚ್ 21ರಂದು ಅಪಘಾತವೊಂದರಲ್ಲಿ ಮೃತಪಟ್ಟ ಯುವ ತುಳು ಚಿತ್ರ ನಿರ್ದೇಶಕ ಹ್ಯಾರಿಸ್ ಕೊಣಾಜೆಕಲ್ಲು ಅವರ ಸಾವಿನ ಬಗ್ಗೆ ಹಲವು ಸಂಶಯಗಳಿದ್ದು ಪ್ರಕರಣದ ಬಗ್ಗೆ ಸಮಗ್ರ ಮರು ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಹ್ಯಾರೀಸ್ ಅವರ ತಂದೆ ಆದಂ ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ.

ಆಟಿಡೊಂಜಿ ದಿನ ಸಿನಿಮಾದ ಚಿತ್ರೀಕರಣ ಶಿರ್ತಾಡಿಯಲ್ಲಿ ನಡೆದಿದ್ದ ವೇಳೆಗೆ ಹತ್ತಿರದ ಮೂಡುಕೊಣಾಜೆಯಲ್ಲಿ ಮಾ21ರ ರಾತ್ರಿ ಒಮ್ನಿ ಕಾರು ಮರಕ್ಕೆ ಢಿಕ್ಕಿಯಾಗಿ ಮೃತಪಟ್ಟಿದ್ದರು.

ಘಟನೆಯ ದಿನ ರಾತ್ರಿ 11ರ ವೇಳೆಗೆ ಮನೆಗೆ ಬಂದಿದ್ದ ಹ್ಯಾರೀಸ್ 11.20ರ ವೇಳೆಗೆ ಫೋನ್ ಕಾಲ್‍ಗೆ ಸ್ಪಂದಿಸಿ ಮನೆಯಿಂದ ತೆರಳಿದ್ದರು.

ಹ್ಯಾರೀಸ್ ತನಗೆ ಜೀವಬೆದರಿಕೆಯಿದೆ ಎಂದು ಹೇಳಿರುವುದು, ಆತನ ಮೊಬೈಲ್ ಸಿಮ್‍ಗಳಿನ್ನೂ ಮನೆಯವರಿಗೆ ಮರಳಿಸದಿರುವುದು, ಚಿತ್ರತಂಡದ ಇಬ್ಬರ ಬಗ್ಗೆ ತನಗೆ ಅನುಮಾನವಿದ್ದು ಶಂಕಿತರನ್ನು ವಿಚಾರಿಸಿ ಸತ್ಯಾಸತ್ಯತೆಯನ್ನು ತಿಳಿಸುವಂತೆ ಆದಂ ಪೊಲೀಸರನ್ನು ವಿನಂತಿಸಿದ್ದಾರೆ.