ಮುಂಬಯಿ: ಬಾಲಿವುಡ್ ನಟಿ, ಕರಾವಳಿ ಬೆಡಗಿ ದೀಪಿಕಾ ಪಡುಕೋಣೆ ಹಾಲಿವುಡ್ ಇಂಡಸ್ಟ್ರಿ ಗೆ ಕಾಲಿಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ.
ಹಾಲಿವುಡ್ ನಟ ವಿನ್ ಡೀಸೆಲ್ ಅವರನ್ನು ದೀಪಿಕಾ ಇತ್ತೀಚೆಗೆ ಭೇಟಿ ಮಾಡಿದ್ದು, ನಟನ ಜತೆ ಇರುವ ಫೋಟೋವೊಂದನ್ನು ದೀಪಿಕಾ ಫೇಸ್ಬುಕ್ಗೆ ಅಪ್ಲೋಡ್ ಮಾಡಿದ್ದಾರೆ. ಇದು ಅಭಿಮಾನಿಗಳ ಕುತೂಹಲವನ್ನು ಕೆಳಿಸಿದ್ದು, ಅವರು ರಿಟರ್ನ್ ಆಫ್ ಕ್ಸಾಂಡರ್ ಕೇಜ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡ ತೊಡಗಿವೆ. ವಿನ್ ಡೀಸೆಲ್ರನ್ನು ಭೇಟಿ ಮಾಡಲು ದೀಪಿಕಾ ಎರಡು ದಿನ ಆಫ್ರಿಕಾಕ್ಕೆ ತೆರಳಿದ್ದರು. ಇದರಿಂದ ದೀಪಿಕಾ ಪಡುಕೋಣೆ ಹಾಲಿವುಡ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ.
ದೀಪಿಕಾ ಪಡುಕೋಣೆ ಬಾಲಿವುಡ್ ನಲ್ಲಿ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದು, ಅಭಿಮಾನಿಗಳ ಮಹಾಪೂರವೇ ಇದೆ. ಇದೀಗ ಪ್ರಸಿದ್ದ ನಟಿಗಳಲ್ಲಿ ದೀಪಿಕಾ ಒಬ್ಬರಾಗಿದ್ದಾರೆ.