ಕನ್ನಡ ಚಿತ್ರರಂಗದ ನಾಯಕಿ ದೀಪಿಕಾ ಕಾಮಯ್ಯ ಬಿಗ್ ಬಾಸ್ ಸೀಸನ್ ನಿಂದ ಬಂದ ಮೇಲೆ ಎಲ್ಲಿ ಮಾಯವಾದರೂ ಎಂಬ ಪ್ರಶ್ನೆ ಗಾಂಧಿನಗರದಲ್ಲಿ ಕೇಳುತ್ತಲೇ ಇತ್ತು. ಇದೀಗ ದೀಪಿಕಾ ಉಗ್ರಾಕ್ಷ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಡಿದೆ.
ಈಗ ಆ ಚಿತ್ರದ ಫೋಟೋಶೂಟ್ ಬೇರೆ ನಡೆದು ಹೋಗಿದೆ. ಈ ನಡುವೆಯೇ ದೀಪಿಕಾ ಕಾಮಯ್ಯ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಅದು ‘ಸಖತ್ ಲವ್’. ಇದು ದೀಪಿಕಾ ನಾಯಕಿಯಾಗಿ ನಟಿಸುತ್ತಿರುವ ಹೊಸ ಚಿತ್ರ. ಇಡೀ ತಂಡ ಕೂಡಾ ಹೊಸದು. ಸಂದೀಪ್ ಶೆಟ್ಟಿ ಈ ಚಿತ್ರದ ನಾಯಕ. ಅದು ಬಿಟ್ಟರೆ ಮಿಕ್ಕ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ. ಚಿಂಗಾರಿ ಮೂಲಕ ಎಂಟ್ರಿ ಕೊಟ್ಟ ದೀಪಿಕಾ ಉಗ್ರಾಕ್ಷ , ಸಖತ್ ಲವ್ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಈಗಾಗಲೇ ನಟಿಸಿರುವ ನೀನೇ ಬರಿ ನೀನೇ ಚಿತ್ರ ಇನ್ನಷ್ಟೇ ತೆರೆಕಾಣಬೇಕಿದೆ.