News Kannada
Thursday, July 07 2022

ಮನರಂಜನೆ

ಲೂಸಿಯಾದಿಂದ ಯೂ-ಟರ್ನ್ ಹೊಡೆದ ಪವನ್ ಕುಮಾರ್ - 1 min read

Photo Credit :

ಲೂಸಿಯಾದಿಂದ ಯೂ-ಟರ್ನ್ ಹೊಡೆದ ಪವನ್ ಕುಮಾರ್

ಗಾಂಧೀನಗರದ ಸಿದ್ಧಸೂತ್ರಗಳನ್ನು ಚಿಂದಿಯಾಗಿಸಿ, ನಿರ್ಮಾಪಕರಿಲ್ಲದೆಯೂ, ಜನರಿಂದಲೇ ಹಣ ಸಂಗ್ರಹಿಸಿ, ಕಡಿಮೆ ಬಜೆಟ್ಟಿನಲ್ಲಿ ಚಿತ್ರ ಮುಗಿಸಿ, ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಮಾಡಿಸಿ, ಇಡೀ ಭಾರತೀಯ ಚಿತ್ರರಂಗವೇ ಹುಬ್ಬೇರಿಸಿ ನೋಡುವಂತೆ ಮಾಡಿದ ಸೃಜನಶೀಲ ನಿರ್ದೇಶಕ ಪವನ್ ಕುಮಾರ್. ಮೊದಲ ಚಿತ್ರ ಲೈಫು ಇಷ್ಟೇನೆಯಲ್ಲಿ ನಿರ್ದೇಶಕನ ಕಿರೀಟ ತೊಟ್ಟರೂ ಮೋಡಿ ಮಾಡದೇ ದೂರ ಉಳಿದ ಪವನ್ ಅನಂತರ ಸೃಷ್ಟಿಸಿದ್ದು ಇತಿಹಾಸ. ಲೂಸಿಯಾ ಚಿತ್ರ ತನ್ನದೇ ಪ್ರೇಕ್ಷಕ ವರ್ಗವನ್ನು ಸೃಷ್ಟಿ ಮಾಡಿ ಭಾರತೀಯ ಚಿತ್ರರಂಗದ ದಿಗ್ಗಜರುಗಳೆಲ್ಲಾ ಕನ್ನಡ ಚಿತ್ರದ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡುವಂತೆ ಮಾಡಿತು. ಲೂಸಿಯಾ ಹವಾ ಚಲಾವಣೆಯಲ್ಲಿರುವಾಗಲೇ ಪವನ್, ನಿಕೋಟಿನ್ ವಿಜ್ಙಾನ ಸೂತ್ರದ ಶೀರ್ಷಿಕೆಯಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನೆಮಾ ಮಾಡುವ ಸುದ್ದಿ ಮಾಡಿದರು. ನಿಕೋಟಿನ್ ಗುಂಗಲ್ಲಿ ಇರುವಾಗಲೇ ಸದ್ದಿಲ್ಲದೆ ಯೂ-ಟರ್ನ್ ಹೊಡೆದುಬಿಟ್ಟಿದ್ದಾರೆ.

ಇತ್ತೀಚಿಗೆ ಬಿಡುಗಡೆಯಾದ ಯೂ-ಟರ್ನ್ ಟ್ರೇಲರ್ ಯೂಟ್ಯೂಬ್, ಫೇಸ್ ಬುಕ್ ನಲ್ಲಿ ತನ್ನ ವಿಶಿಷ್ಟವಾದ ಮೇಕಿಂಗ್ ನಿಂದ ಸದ್ದು ಮಾಡುತ್ತಾ, ಕಡಿಮೆ ಅವಧಿಯಲ್ಲಿ 2 ಲಕ್ಷಕ್ಕೂ ಅಧಿಕ ವೀಕ್ಷಕರ ಮನಸೂರೆಗೊಳಿಸಿದೆ. ಟ್ರೇಲರ್ ನೋಡಿದ ಪ್ರತಿಯೊಬ್ಬರೂ ತಾವು ನಿಜವಾಗಿಯೂ ನೋಡುತ್ತಿರುವುದು ಕನ್ನಡ ಸಿನೆಮಾ ಟ್ರೇಲರೇನಾ ಎಂದು ಸಂದೇಹ ಪಡುವಷ್ಟರ ಮಟ್ಟಿಗೆ ಅದ್ಧೂರಿಯಾಗಿದೆ. ಸಿನೆಮಾವೆಂದರೆ ಸ್ಟಾರು, ಬಿಗ್ಬಜೆಟ್ಟು, ನಾಲ್ಕು ಹಾಡುಗಳು, ಮೂರು ಫೈಟುಗಳು ಅನ್ನುವವರ ಮಧ್ಯೆ ಸೃಜನಶೀಲ ಪವನ್ ಸಿನೆಮಾಗಳಿಗೆ ಪ್ರೇಕ್ಷಕ ಕಣ್ಣಿಗೆ ಎಣ್ಣೆಬಿಟ್ಟು ಕಾಯುವಂತಾಗಿದೆ.

ಯೂ-ಟರ್ನ್ ಸಿನೆಮಾ ರೂಪ ಪಡೆದ ಬಗೆಯನ್ನು ವಿವರಿಸುವ ಪವನ್ ಜುಲೈನಲ್ಲಿ ಒಂದಿನ ನಾನು ನನ್ನ ಮಗಳು ಲೂಸಿಯನ್ನು ಶಾಲೆಗೆ ಕರೆದುಕೊಂಡು ಹೋದಾಗ ಟ್ರಾಫಿಕ್ ನಲ್ಲಿ ಹೊಳೆದ ಕಥೆಗೆ , ಅಲ್ಲೇ ಶಾಲೆ ಎದುರಲ್ಲಿ ಗಾಡಿಯನ್ನು ಪಾರ್ಕ್ ಮಾಡಿ ಒಂದು ಗಂಟೆಗಿಂತ ಹೆಚ್ಚು ಹೊತ್ತು ಕೂತು ಸ್ಕ್ರಿಪ್ಟ್ ರೂಪಕ್ಕೆ ಇಳಿಸಲು ತೊಡಗಿದೆ. ಮುಂದಿನ 2-3 ದಿನಗಳಲ್ಲಿ ಯೂ-ಟರ್ನ್ ಕಥೆಯು ರೂಪ ಪಡೆಯಿತು ಎನ್ನುತ್ತಾರೆ.

ಚಿರಪರಿಚಿತ ನಟರನ್ನೇ ಚಿತ್ರಕ್ಕೆ ಬಳಸಿಕೊಳ್ಳುವ ಬಯಕೆಯಿದ್ದರೂ ಬಜೆಟ್ ಒಪ್ಪದ ಕಾರಣ ದೂಸ್ರಾ ಮಾತಿಲ್ಲದೆ ಹೊಸ ಮುಖಗಳನ್ನೇ ಆರಿಸಬೇಕಾಯಿತು ಎನ್ನುತ್ತಾರೆ ಪವನ್. ಚಿತ್ರದ ಪ್ರಮುಖ ಪಾತ್ರದಲ್ಲಿ ಹೊಸ ಪ್ರತಿಭೆ ಶ್ರದ್ಧಾ ಶ್ರೀನಾಥ್, ಈಗಾಗಲೇ ಗುರುತಿಸಿಕೊಂಡಿರುವ ದಿಲೀಪ್ ರಾಜ್ ಮತ್ತು ಗಖಂ ಕನ್ನಡಿಗ, ಹಾಲಿವುಡ್ ನಟ ರೋಜರ್ ನಾರಾಯಣ್ ಪೋಲಿಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡರೆ, ರಂಗಿತರಂಗದ ನಟಿ ರಾಧಿಕಾ ಚೇತನ್, ನಾಯಕಿ ಶ್ರದ್ಧಾಗೆ ಸಮಾನಾಗಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಚಿತ್ರದ ತಾಂತ್ರಿಕ ವಿಭಾಗದಲ್ಲಿ, ಸಿನೆಮಾಟೋಗ್ರಾಫರ್ ಆಗಿ ಮೊದಲ ದೃಶ್ಯಗಳನ್ನು ಚಿತ್ರಿಸಿದ ಲೂಸಿಯಾದ ಸಿದ್ಧಾರ್ಥ್ ನೂನಿ, ಸ್ಟಾರ್ ಸಿನೆಮಟೋಗ್ರಾಫರ್ ಸತ್ಯ ಹೆಗ್ಡೆ ಮತ್ತು ಅದ್ವೈತ ಅವರ ಕೈಚಳಕವಿದೆ. ಲೂಸಿಯಾದ ಪೂರ್ಣಚಂದ್ರ ತೇಜಸ್ವಿಯವರೇ ಸಂಗೀತದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.

ಮೊದಲ ಬಾರಿಗೆ ತನ್ನದೇ ‘ಪವನ್ ಕುಮಾರ್ ಸ್ಟುಡಿಯೋಸ್’ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದ ಪವನ್, ಯೂ-ಟರ್ನ್ ಚಿತ್ರವನ್ನು ಸ್ವತಃ ತಾವೇ ನಿರ್ಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಸಂಸ್ಥೆಯಿಂದ ಹೊಸ ಕ್ರಿಯಾಶೀಲ ಪ್ರತಿಭೆಗಳಿಗೆ ಅವಕಾಶ ಕೊಡುವ ಆಶಯದ ಮಾತುಗಳನ್ನಾಡುತ್ತಾರೆ ಪವನ್.

See also  ಸಂಚಾರಿ ವಿಜಯ್ “ರಿಕ್ತ” ಅವತಾರಗಳು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು