ಗೋವಿಂದಾಯ ನಮಃ, ಗೂಗ್ಲಿ ಮತ್ತು ರಣವಿಕ್ರಮ ಚಿತ್ರಗಳ ಮಾಂತ್ರಿಕ ಪವನ್ ವಡೆಯರ್ ಈ ಬಾರಿ “ಜೆಸ್ಸಿ” ಯ ಹಿಂದೆ ಬಿದ್ದಿದ್ದಾರೆ. ಧನಂಜಯ್, ಪಾರುಲ್ ಯಾದವ್ ಮತ್ತು ರಘು ಮುಖರ್ಜಿ ಪ್ರಮುಖ ಪಾತ್ರಗಳಲ್ಲಿರುವ “ಜೆಸ್ಸಿ” ಒಂದು ಕ್ಯೂಟ್ ಲವ್ ಸ್ಟೋರಿ.
ಜೆಸ್ಸಿಗಿಫ್ಟ್ ಅನ್ನುವ ಹುಡುಗನ ಹುಡುಗಾಟಗಳು ಮತ್ತು ಪ್ರೇಮದಾಟಗಳು ಈ “ಜೆಸ್ಸಿ”. ಹೆಲ್ಮೆಟ್ ಹಾಕ್ಕೊಳ್ಳೊದು ಬೇಕಾ? ಬೇಡ್ವಾ? ಎಂಬ ವಿಶೇಷವಾದ ಹಾಡನ್ನು ಹೊತ್ತು ತಂದಿರುವ ಜೆಸ್ಸಿ, ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆಗೆ ಜೆ.ಅನೂಪ್ ಸೀಳಿನ್ ಕೈಚಳಕದ ಮಾಧುರ್ಯಭರಿತ ಹಾಡುಗಳನ್ನು ಪ್ರೇಮಿಗಳಿಗೆ ಉಡುಗೊರೆಯಾಗಿ ನೀಡಿದ್ದಾನೆ.
ತಾಂತ್ರಿಕತೆಯಲ್ಲಿ ಪಳಗಿರುವ ಪವನ್ ವಡೆಯರ್ ಪ್ರತೀ ಚಿತ್ರದಲ್ಲೂ ವಿಶೇಷತೆಯನ್ನು ಕೊಟ್ಟವರು. ಈ ಬಾರಿ ಜೆಸ್ಸಿ Gift of Love ಅನ್ನುವ ಮುದ್ದಾದ ಶೀರ್ಷಿಕೆಯಲ್ಲಿ ಯುವ ಮನಸುಗಳೊಳಗೆ ಗಿಟಾರ್ ಬಾರಿಸಲು ತಯಾರಾಗಿದ್ದಾರೆ. ಆರ್.ಎಸ್ ಪ್ರೊಡಕ್ಷನ್ಸ್ ಮೂಲಕ ಆರ್.ಶ್ರೀನಿವಾಸ್ ಮತ್ತು ಕೆ.ಪಿ.ಶ್ರೀಕಾಂತ್ ಜೆಸ್ಸಿಯನ್ನು ನಿರ್ಮಿಸುತ್ತಿದ್ದಾರೆ. ಉಳಿದಂತೆ ಅರುಳ್ ಸೋಮಸುಂದರಂ ಛಾಯಾಗ್ರಹಣ, ಸುರೇಶ್ ಅರ್ಮುಗಂ ಸಂಕಲನದ ಚಿತ್ರ ಬಿಡುಗಡೆಯ ಹಾದಿಯಲ್ಲಿದೆ.