News Kannada
Friday, October 07 2022

ಮನರಂಜನೆ

ರಂಬಾರೂಟಿ ನಿರ್ದೇಶಕ ಪ್ರಜ್ವಲ್ ಅತ್ತಾವರ್ ಮನದಾಳದ ಮಾತು - 1 min read

Photo Credit :

 ರಂಬಾರೂಟಿ ನಿರ್ದೇಶಕ ಪ್ರಜ್ವಲ್ ಅತ್ತಾವರ್ ಮನದಾಳದ ಮಾತು

1.ನಿಮ್ಮ ಚೊಚ್ಚಲ ಚಿತ್ರ “ರಂಬಾರೂಟಿ” ಹೇಗೆ ಶುರುವಾಯ್ತು?
ನಾನು ಕಿರುಚಿತ್ರಕ್ಕೆ ಮಾಡಿರುವ ಕಥೆಯನ್ನು ಪ್ರೊಡ್ಯುಸರ್ ಅವರು ದೊಡ್ಡ ಸಿನೆಮಾ ಮಾಡೋಣ ಅಂದಾಗ ತುಂಬಾ ಉತ್ಸಾಹದಲ್ಲಿ ಚಿತ್ರಕಥೆ ಬರೆಯಲು ಕುಳಿತೆ, ಮೂರು ತಿಂಗಳಲ್ಲಿ ಸ್ಕ್ರಿಪ್ಟ್ ರೂಪ ಪಡೆಯಿತು. ಆಮೇಲೆ ಒಬ್ಬೊಬ್ಬರಾಗಿ ತಂತ್ರಜ್ಞರು ಸೇರಿಕೊಳ್ಳುತ್ತಾ ಟೀಂ ಬೆಳೆಯುತ್ತಾ ಹೋಯ್ತು. ಕಲಾವಿದರೆಲ್ಲರೂ ಹೊಸಬರಿರಬೇಕೆಂದು ಪ್ರೊಡ್ಯೂಸರ್ ಹೇಳಿದ್ದರಿಂದ ಆಡಿಷನ್ ಮಾಡ್ತಾ ನಟ-ನಟಿಯರನ್ನು ಸೆಲೆಕ್ಟ್ ಮಾಡಿದೆ. ಎಲ್ಲಾ ಹೊಸಬರು ಹಾಗಾಗಿ ಅನುಭವದ ಕೊರತೆ ಇತ್ತು. ಬರ್ತಾ ಬರ್ತಾ ಎಲ್ಲವನ್ನೂ ಕಲಿತುಕೊಂಡೆವು. ಸಿನೆಮಾದಲ್ಲಿ ಐದು ಹಾಡುಗಳಿದ್ದು, ನಾಲ್ಕಕ್ಕೆ ಹಾಡಿಗೆ ನಾನೇ ಟ್ಯೂನ್ ಕಂಪೋಸ್ ಮಾಡಿ ಸಾಹಿತ್ಯ ಬರೆದಿದ್ದೇನೆ, ಮತ್ತೊಂದು Rap songನ್ನು ನನ್ನ ಗೆಳೆಯ ಸೌಮೇಶ್ ಬಂಗೇರಾ ಬರೆದಿದ್ದಾರೆ.

2.ಮೊದಲ ಸಿನೆಮಾ ನಿರ್ದೇಶಿಸುವಾಗ ನಿಮಗೆ ಎದುರಾದ ಸವಾಲುಗಳೇನು?
ಇದೊಂದು ಪ್ರಯೋಗಾತ್ಮಕ ಸಿನೆಮಾ ಹಾಗಾಗಿ ಸ್ವಲ್ಪ ಹೆದರಿಕೆಯಿದೆ. ಸೋಲು-ಗೆಲುವು ಸಾಮಾನ್ಯ. ಈವರೆಗೂ ಹಾಡುಗಳು ಮತ್ತು ಟ್ರೇಲರ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಸೋ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ದುಡಿದವರಿಗೆ ನ್ಯಾಯ ಸಿಕ್ಕರೆ ಅದೇ ದೊಡ್ಡ ಖುಷಿ.

3.ಹೊಸ ನಿರ್ದೇಶಕನಾಗಿ ನಿಮಗೆ ನಿಮ್ಮ ಹೊಸ ತಂಡದ ಸಹಕಾರ ಹೇಗಿತ್ತು?
ರಂಬಾರೂಟಿ ಸಂಪೂರ್ಣ ಹೊಸ ತಂಡದ ಪ್ರಯತ್ನ. ತಂಡದ ಎಲ್ಲರೂ ತುಂಬಾನೇ ಹಾರ್ಡ್ ವರ್ಕ್ ಮಾಡಿದ್ದಾರೆ. ಸಿನೆಮಾ, ವೀಕೆಂಡ್ ನಲ್ಲಿ ಮಾತ್ರ ಶೂಟಿಂಗ್ ಆಗುತ್ತಿತ್ತು. ಹಾಗಾಗಿ ತಂಡದ ಪ್ರತಿಯಬ್ಬರೂ ವೀಕೆಂಡ್ ನಲ್ಲಿ ಜೊತೆ ಸೇರಿ ಹಸಿವು, ನಿದ್ದೆ ಬಿಟ್ಟು, ಹಗಲು-ರಾತ್ರಿಯೆನ್ನದೆ ಶ್ರಮಿಸಿದ್ದಾರೆ.

4.ರಂಬಾರೂಟಿ ಸಿನೆಮಾ ನಿರ್ದೇಶಿಸುವಾಗ ನಿಮಗೆ ಎದುರಾದ ಸವಾಲುಗಳೇನು?
ನನಗೆ ಈ ಸಿನೆಮಾ ರಂಗನೇ ಒಂದು ಸಮುದ್ರದಂತಿತ್ತು. ಅದರಲ್ಲಿ ನಾನೊಂದು ಅತೀ ಸಣ್ಣ ಮೀನು. ಹಾಗಾಗಿ ತುಂಬಾ ಭಯ ಇತ್ತು. ಆದರೆ ಚಿತ್ರರಂಗದ ಕೆಲವು ಹಿರಿತಲೆಗಳ ಮಾರ್ಗದರ್ಶನ ಮತ್ತು ಕಲಾವಿದರ ಸಹಕಾರದಿಂದ ಎಲ್ಲಾ ಸವಾಲುಗಳನ್ನೂ ಬಂದ ಹಾಗೇ ಸುಲಭವಾಗಿ ಸ್ವೀಕರಿಸಿದ್ದೇನೆ.

5.ನೀವು ಹೊಸ ನಿರ್ದೇಶಕರಿಗೆ ಕೊಡುವ ಸಲಹೆಗಳೇನು?
ಸಿನೆಮಾ ಬಗ್ಗೆ ಸ್ಟಡಿ ಮಾಡಿ, ಪ್ರೇಕ್ಷಕರ ಟೇಸ್ಟ್ ಅರಿತು, ಅವರನ್ನು ಮನಸ್ಸಲ್ಲಿಟ್ಟು ಸ್ಕ್ರಿಪ್ಟ್ ಮಾಡಿ. ಸಿನೆಮಾ ಸುಮ್ಮನೆ ತೆವಲಿಗಾಗಿ ಮಾಡುವಂತದ್ದಲ್ಲ. ಚಿತ್ರಕಥೆ ಬಗ್ಗೆ ಜಾಸ್ತಿ ಗಮನ ಕೊಡಿ. ಅದೇ ರೀತಿ ದುಡ್ಡು ಹಾಕುವ ನಿರ್ಮಾಪಕನ ಬಗ್ಗೆ ಯೋಚಿಸಿ, ಸುಮ್ಮಸುಮ್ಮನೆ ಎಲ್ಲೂ ದುಡ್ಡು ಖರ್ಚಾಗದಂತೆ ಜಾಣ್ಮೆ ವಹಿಸಬೇಕು. ಸಂಪೂರ್ಣ ಪೂರ್ವ ತಯಾರಿ ಮಾಡಿಕೊಂಡೇ ಸಿನೆಮಾ ಮಾಡಿ.

6.ನೀವು ನೋಡುತ್ತಿರುವ ತುಳುಚಿತ್ರರಂಗ ಹೇಗಿದೆ?
ತುಳುಚಿತ್ರರಂಗ ತುಂಬಾನೇ ಬದಲಾಗಿದೆ, ಬದಲಾಗ್ತಿದೆ. “ಒರಿಯರ್ದೊರಿ ಅಸಲ್” ಚಿತ್ರ ಪರಭಾಷಾ ಚಿತ್ರಗಳ ನಡುವೆ ತುಳು ಚಿತ್ರಗಳಿಗೂ ಭವಿಷ್ಯವಿದೆ ಎಂದು ತೋರಿಸಿಕೊಟ್ಟ ಚಿತ್ರ. ಕನ್ನಡಚಿತ್ರರಂಗಕ್ಕೆ ಪೈಪೋಟಿ ನೀಡುವ ಮಟ್ಟಕ್ಕೆ ನಮ್ಮ ಚಿತ್ರರಂಗ ಬೆಳೆಯುತ್ತಿದೆ. ಪರಭಾಷಾ ಸಿನೆಮಾಗಳನ್ನು ಕಾಪಿ ಮಾಡುವುದನ್ನು ಬಿಟ್ಟು ತುಲುನಾಡಿನ ಸೊಗಡಿನ ಸ್ವಮೇಕ್ ಚಿತ್ರಗಳೇ ಬರಲಿ ಎಂಬುದು ನನ್ನ ಆಶಯ.

See also  ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಅವನೇ ಶ್ರೀಮನ್ನಾರಾಯಣ

7.ನಿಮಗೆ ತಿಳಿದಿರುವ ತುಳುಚಿತ್ರರಂಗದ ಒಳಗುಟ್ಟುಗಳೇನು? ನಿಮಗೇನಾದರೂ ಕೆಟ್ಟ ಅನುಭವ ಆಗಿದೆಯಾ?
ನನಗೇನು ಆ ಥರದ ಕೆಟ್ಟ ಅನುಭವವಾಗಿಲ್ಲ. ಒಂದು ವಿಷಯ ಹೇಳ್ಬೇಕಂದ್ರೆ ಇಲ್ಲಿ ಹೆಲ್ದಿ ಕಾಂಪಿಟೀಶನ್ ಇಲ್ಲ. ಮತ್ಸರ, ಬೇಕು ಬೇಕಂತ ಮತ್ತೊಬ್ಬರ ಕಾಲೆಳೆಯುವುದು ಇಂತಹ ಕೆಟ್ಟ ಬೆಳವಣಿಗೆಗಳು ಚಿತ್ರರಂಗಕ್ಕೆ ಮಾರಕವಾಗುತ್ತಿವೆ.

8.ಪ್ರಜ್ವಲ್, ನಿಮ್ಮ ಮುಂದಿನ ಕನಸುಗಳ ಬಗ್ಗೆ ಹೇಳಿ?
ಹೊಸ ತುಳುಚಿತ್ರ “ತೊಟ್ಟಿಲ್” ಚಿತ್ರೀಕರಣ ಮುಗಿಸಿ ಡಬ್ಬಿಂಗ್ ಹಂತದಲ್ಲಿದೆ. ಇದೊಂದು ಮದರ್ ಸೆಂಟಿಮೆಂಟ್ ಇರುವ ಕಮರ್ಷಿಯಲ್ ಚಿತ್ರ. ಅರವಿಂದ್ ಬೋಳಾರ್, ಉಮೇಶ್ ಮಿಜಾರ್ ಮತ್ತು ರಂಗಭೂಮಿಯ ಹಲವು ಕಲಾವಿದರು ಅಭಿನಯಿಸಿದ್ದಾರೆ. ಕನ್ನಡ ಚಿತ್ರ ಮಾಡುವ ಆಫರ್ ವೊಂದು ಬಂದಿದೆ. ಸದ್ಯದಲ್ಲೇ ತಮಿಳು ಚಿತ್ರರಂಗದ ಪ್ರಖ್ಯಾತ ಬ್ಯಾನರ್ ನಲ್ಲಿ ಸಹ-ನಿರ್ದೇಶಕನಾಗಿ ದುಡಿಯಲಿದ್ದೇನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು