News Kannada
Monday, October 03 2022

ಮನರಂಜನೆ

ಮೊದಲ ಬಾರಿಗೆ ಶ್ರೀಮುರಳಿ ಜತೆ ನಟಿಸಲಿದ್ದಾರೆ ಶಾನ್ವಿ - 1 min read

Photo Credit :

ಮೊದಲ ಬಾರಿಗೆ ಶ್ರೀಮುರಳಿ ಜತೆ ನಟಿಸಲಿದ್ದಾರೆ ಶಾನ್ವಿ

ಬೆಂಗಳೂರು: ‘ಮಾಸ್ಟರ್ ಪೀಸ್’ ಚಿತ್ರದಲ್ಲಿ ಎಲ್ಲರಿಗೂ ಮೋಡಿ ಮಾಡಿದ್ದ ನಟಿ ಶಾನ್ವಿ ಅವರಿಗೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಭರಪೂರ ಅವಕಾಶಗಳು ದೊರೆಯುತ್ತಿದ್ದು, ಜಯಣ್ಣ ಕಂಬೈನ್ಸ್ ನಿರ್ಮಾಣ ಸಂಸ್ಥೆ ತಮ್ಮ ಮುಂದಿನ ಚಿತ್ರ ‘ಮಫ್ತಿ’ಗೆ ಮತ್ತೆ ನಟಿ ಶಾನ್ವಿ ಶ್ರೀವಾಸ್ತವ ಅವರನ್ನು ಆಯ್ಕೆ ಮಾಡಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಜತೆ ನಟಿಸಲಿದ್ದಾರೆ.

Shanvi Srivastav signs her next opposite Sri Murali-1ಈ ದೊಡ್ಡ ಸಿನೆಮಾದ ಭಾಗವಾಗಿರುವುದಕ್ಕೆ ಉತ್ಸುಕರಾಗಿರುವ ಶಾನ್ವಿ, ಮಫ್ತಿ’ ಸಿನೆಮಾದ ನಾಯಕ ನಟಿಯ ಪಾತ್ರಕ್ಕೆ ನನ್ನನ್ನು ಪರಿಗಣಿಸಿದ್ದಾರೆ ಎಂದು ಕೆಲವರಿಂದ ಕೇಳಿದ್ದೆ. ಜಯಣ್ಣ ಅವರು ನನಗೆ ಪಾತ್ರ ನೀಡುವುದಕ್ಕೆ ಉತ್ಸುಕರಾಗಿದ್ದಾರೆ ಎಂದು ತಿಳಿದಿತ್ತು ಈಗ ಕಳೆದ ಎರಡು ದಿನಗಳಲ್ಲಿ ಎಲ್ಲವೂ ಧೃಢೀಕರಣ ಆಗಲಿದೆ. ನಾನು ಪಾತ್ರಕ್ಕೆ ಸರಿ ಹೊಂದುತ್ತೇನೆ ಮತ್ತು ಅವರಿಗೆ ಹೆಚ್ಚು ತೊಂದರೆ ನೀಡುವುದಿಲ್ಲವಾದ್ದರಿಂದ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದೆನಿಸುತ್ತದೆ ಎನ್ನುತ್ತಾರೆ.

ನಿರ್ದೇಶಕ ನರ್ತನ್ ಅವರು ಆಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರತಂಡ ಈಗಾಗಲೇ ಶೂಟಿಂಗ್ ಗಾಗಿ ಇಟಲಿಯತ್ತ ಪ್ರಯಾಣ ಬೆಳೆಸಿವೆ. ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರಕ್ಕೆ ಕ್ಯಾಮೆರಾ ಕೈ ಚಳಕ ತೋರಿದ್ದ ನವೀನ್ ಅವರು ಈ ಚಿತ್ರಕ್ಕೂ ಛಾಯಾಗ್ರಾಹಕರಾಗಿ ದುಡಿಯುತ್ತಿದ್ದಾರೆ. ಶಿವರಾಜ್ ಕುಮಾರ್ ಅವರು ಜಯಣ್ಣ ಕಂಬೈನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ‘ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರದಲ್ಲಿ ಮಿಂಚಿದರೆ, ಶಾನ್ವಿ ಅವರು ಕೂಡ ಇದೇ ಬ್ಯಾನರ್ ಅಡಿಯಲ್ಲಿನ ‘ಸಾಹೇಬ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶಾನ್ವಿ ಮತ್ತು ಮನೋರಂಜನ್ ಡ್ಯುಯೆಟ್ ಹಾಡಿರುವ ‘ಸಾಹೇಬ’ ಚಿತ್ರದ ಶೂಟಿಂಗ್ ಕೂಡ ಕೊನೆ ಹಂತದಲ್ಲಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಸದ್ಯಕ್ಕೆ ‘ಸಾಹೇಬಾ’ ಮತ್ತು ‘ಗಂಡು ಎಂದರೆ ಗಂಡು’ ಸಿನೆಮಾಗಳಲ್ಲಿ ಸಮಾನಾಂತರವಾಗಿ ನಟಿಸುತ್ತಿರುವ ನಟಿ ಶಾನ್ವಿ ಆಗಸ್ಟ್ ನಲ್ಲಿ ‘ಮಫ್ತಿ’ ಸೆಟ್ ಸೇರಲಿದ್ದಾರೆ. ಶ್ರೀಮುರಳಿ ಜೊತೆಗೆ ಇದೆ ಮೊದಲ ಬಾರಿಗೆ ಅವರು ನಟಿಸುತ್ತಿದ್ದಾರೆ.

See also  ಕುತೂಹಲ ಕೆರಳಿಸಿದ "ಉದ್ಘರ್ಷ" ತೆರೆ ಮೇಲೆ ಬರಲು ರೆಡಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು