News Kannada
Friday, September 30 2022

ಮನರಂಜನೆ

ಮುರಾರಿ ಬುಲೆಟ್ ಬೈಕ್ ಹರಾಜಿಗೆ! - 1 min read

Photo Credit :

ಮುರಾರಿ ಬುಲೆಟ್ ಬೈಕ್ ಹರಾಜಿಗೆ!

ಇತ್ತೀಚೆಗೆ ತೆರೆಕಂಡಿರುವ ಮುಕುಂದ ಮುರಾರಿ ಸಿನಿಮಾದಲ್ಲಿ ಮುರಾರಿಯಾಗಿ ನಟಿಸಿದ್ದ ಕಿಚ್ಚ ಸುದೀಪ್ ಚಿತ್ರದಲ್ಲಿ ಉಪಯೋಗಿಸಿದ ಬುಲೆಟ್ ಬೈಕ್ ಅನ್ನು ಹರಾಜಿಗಿಡಲಾಗುತ್ತಿದೆ.

ಮುಕುಂದ ಮುರಾರಿ ಚಿತ್ರದ ವಿತರಕ ಜಾಕ್ ಮಂಜು ಅವರ ಸಲಹೆ ಮೇರೆಗೆ ಬೈಕ್ ನ್ನು ಹರಾಜಿಗೆ ಇಡಲಾಗುತ್ತಿದ್ದು ಅದರಿಂದ ಬಂದ ಹಣವನ್ನು ತುಮಕೂರಿನ ಸಿದ್ದಗಂಗಾ ಮಠಕ್ಕೆ ಮಕ್ಕಳ ಅನ್ನದಾಸೋಹ ಕಾರ್ಯಕ್ರಮಕ್ಕೆ ನೀಡಲು ಚಿತ್ರತಂಡ ನಿರ್ಧರಿಸಿದೆ. ಬೈಕ್ ನ ಹರಾಜು ನವೆಂಬರ್ 11ರಂದು ಬೆಳಗ್ಗೆ 11 ಗಂಟೆಯಿಂದ 12 ಗಂಟೆಯವರೆಗೆ 1 ಗಂಟೆ ಕಾಲ ನಡೆಯಲಿದೆ ಎಂದು ಮಾಹಿತಿ ನೀಡಿದರು ಜಾಕ್ ಮಂಜು.

ಚಿತ್ರವನ್ನು ವೀಕ್ಷಿಸಿದ ಸುದೀಪ್ ಮತ್ತು ಉಪೇಂದ್ರ ಅಭಿಮಾನಿಗಳು ಬೈಕ್ ನ್ನು ಖರೀದಿಸಲು ಉತ್ಸುಕತೆ ತೋರಿಸುತ್ತಿದ್ದರು. ಆಗ ನಮಗೆ ಹರಾಜಿಗಿಟ್ಟರೆ ಹೇಗೆ ಎಂಬ ಯೋಚನೆ ಹೊಳೆಯಿತು. ಕೋದಂಡ ಎಂಬ ವ್ಯಕ್ತಿ ಈಗಾಗಲೇ ಅದನ್ನು 2 ಲಕ್ಷಕ್ಕೆ ಖರೀದಿಸಲು ಮುಂದೆ ಬಂದಿದ್ದಾರೆ. ಆದರೆ ನಾವು ನವೆಂಬರ್ 11ರವರೆಗೆ ಕಾಯುತ್ತೇವೆ ಎನ್ನುತ್ತಾರೆ ವಿತರಕರು.

ಬುಲೆಟ್ ಬೈಕ್ ನ್ನು ಬೆಂಗಳೂರಿನ ಮೇನಕಾ ಚಿತ್ರಮಂದಿರದ ಎದುರು ನಿನ್ನೆಯಿಂದ ಪ್ರದರ್ಶನಕ್ಕೆ ಇಡಲಾಗಿತ್ತು. ಇಂದು ಮೈಸೂರು ಕಡೆಗೆ ಪ್ರಯಾಣ ಬೆಳೆಸಲಿದ್ದು ನಂತರ ಶಿವಮೊಗ್ಗ, ಹುಬ್ಬಳ್ಳಿ, ದಾವಣಗೆರೆ ಮತ್ತು ತುಮಕೂರುಗಳಲ್ಲಿ ಚಿತ್ರಮಂದಿರಗಳ ಮುಂದೆ ಸಂಚರಿಸಿ ಮತ್ತೆ ಮೇನಕಾ ಚಿತ್ರಮಂದಿರದ ಎದುರು ನವೆಂಬರ್ 9 ಮತ್ತು 10 ರಂದು ಪ್ರದರ್ಶನಕ್ಕೆ ನಿಲ್ಲಲಿದೆ.

 

 

 

 

See also  ಅಮಲ್ ಪಾಲ್- ವಿಜಯ್ ದಾಂಪತ್ಯ ಜೀವನ ಡಿವೋರ್ಸ್ ನಲ್ಲಿ ಅಂತ್ಯ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು