ಮುಂಬೈ: ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಕಳೆದ ಕೆಲ ವರ್ಷಗಳಿಂದ ಸಮಾಜ ಸೇವೆ ಮಾಡುತ್ತಾ ಬಡವರಿಗೆ ನೆರವು ನೀಡಿದ್ದಾರೆ. ಇದೀಗ ಐದು ತಿಂಗಳ ಮಗುವಿನ ಹೃದಯ ಶಸ್ತ್ರಚಿಕಿತ್ಸೆಗೆ 1 ಕೋಟಿ ರೂಪಾಯಿ ಹಣ ನೀಡಿ ಮಗುವಿನ ಪ್ರಾಣ ಉಳಿಸಿದ್ದಾರೆ.
ಕಳೆದ 2007 ರಿಂದ ಬಿಯಿಂಗ್ ಹ್ಯೂಮನ್ ಎಂಬ ಸಹಾಯ ಸಂಸ್ಥೆ ನಡೆಸಿಕೊಂಡು ಬರುತ್ತಿರುವ ಸಲ್ಮಾನ್ ಖಾನ್ ಇಲ್ಲಿಯವರೆಗೂ ಅನೇಕ ಬಡ ಕುಟುಂಬಳಿಗೆ ಸಹಾಯ ಮಾಡಿದ್ದಾರೆ. ಮಕ್ಕಳ ಆರೋಗ್ಯ, ಶಸ್ತ್ರಚಿಕಿತ್ಸೆ, ಶಿಕ್ಷಣಕ್ಕೆ ಸುಮಾರು 50 ಕೋಟಿ ಹಣ ಈವರೆಗೆ ಖರ್ಚು ಮಾಡಿದ್ದಾರೆ.
5 ತಿಂಗಳ ಪ್ರಿಮೆಚ್ಯುರ್ ಮಗುವಿನ ತಾಯಿ ಹೆರಿಗೆ ಸಂದರ್ಭ ಸಾವನ್ನಪ್ಪಿದ್ದು, ಬದುಕುಳಿದ ಮಗುವು ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದು ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದ್ದರು. ಆದರೆ ಮಗುವಿನ ಮನೆಯವರಲ್ಲಿ ಶಸ್ತ್ರಚಿಕಿತ್ಸೆ ಮಾಡುವಷ್ಟು ಹಣವಿರಲಿಲ್ಲ. ಆಗ ನೆರವಿಗೆ ಬಂದಿದ್ದು ಬಾಲಿವುಡ್ನ ಭಜರಂಗಿ ಭಾಯ್ ಜಾನ್ ಸಲ್ಮಾನ್ ಖಾನ್. ಮಗುವಿನ ಶಸ್ತ್ರಚಿಕಿತ್ಸೆಗೆ ಹಣ ನೀಡಿ ಮಗುವಿನ ಪ್ರಾಣ ಉಳಿಸಿ ಮಾನವೀಯತೆ ಮೆರೆದಿದ್ದಾರೆ.