ಬಾಲಿವುಡ್ ನ ಸ್ಟಾರ್ ಡೈರಕ್ಟರ್ ಕರಣ್ ಜೋಹರ್ ಪ್ರೀತಿ ಪ್ರೇಮದ ಬಗ್ಗೆ ಅದೆಷ್ಟೋ ಚಿತ್ರಗಳನ್ನು ನಿರ್ದೇಶಿಸಿದ್ದು, ಎಲ್ಲವೂ ಸೂಪರ್ ಡೂಪರ್ ಹಿಟ್, ಆದರೆ ರಿಯಲ್ ಲೈಫ್ ನಲ್ಲಿ ಮೂರು ಪ್ರೇಮ್ ಕಹಾನಿ ಹೊಂದಿರುವ ಕರಣ್ ನಿಜ ಜೀವನದ ಲವ್ ಸ್ಟೋರಿ ಮಾತ್ರ ಸೂಪರ್ ಫ್ಲಾಪ್.
ಹೌದು ಆಶ್ಚರ್ಯವಾದರೂ ನಂಬಲೇ ಬೇಕು. ಈ ಬಗ್ಗೆ ಸತಃ ಕರಣ್ ಜೋಹಾರ್ ಹೇಳಿದ್ದು, ನನ್ನದು ಬರೀ ಒನ್ ಸೈಡ್ ಲವ್ ಆಗಿದೆ ಮತ್ತು ನಾನು ಯಾರನ್ನು ಪ್ರೀತಿಸಿದ್ದೇನೋ ಅವರಿಂದ ನನಗೆ ಪ್ರೀತಿ ಸಿಗಲಿಲ್ಲ. ಲವ್ ನಲ್ಲಿ ನನಗೆ ಸಕ್ಸಸ್ ಅನ್ನೋದು ಗೊತ್ತೇ ಇಲ್ಲ ಅಥವಾ ನನ್ನ ಆಯ್ಕೆಯೇ ತಪ್ಪಾಗಿರಬಹುದು. ನನಗೆ 44 ವರ್ಷವಾದರೂ ನಾನು ಇನ್ನೂ ಸಿಂಗಲ್ ಆಗಿದ್ದೇನೆ ಎಂದಿದ್ದಾರೆ.
ಪ್ರತಿಯೊಬ್ಬರೂ ತಮಗೆ ಸೂಕ್ತವಾದ ಸಂಗಾತಿಯನ್ನು ಹುಡುಕುತ್ತಾರೆ ಮತ್ತು ಪ್ರೀತಿಯಲ್ಲಿ ಬೀಳಲು ಬಯಸುತ್ತಾರೆ. ಆದರೆ ಈ ವಿಷ್ಯದಲ್ಲಿ ನಾನು ಕಂಪ್ಲೀಟ್ ಫ್ಲಾಪ್ ಆಗಿದ್ದೇನೆ ಎಂದರು. ರಣವೀರ್ ಕಪೂರ್ ಕೂಡ ‘ಏ ದಿಲ್ ಹೇ ಮುಷ್ಕಿಲ್’ ಕರಣ್ ಜೋಹರ್ ಅವರ ರಿಯಲ್ ಸ್ಟೋರಿ ಎಂದು ಚೇಡಿಸಿದ್ದರು. ಇದೀಗ ಸ್ವತಃ ಕರಣ್ ಅವರೇ ಈ ರೀತಿ ಹೇಳಿಕೆ ನೀಡಿ ಅವರ ಅಭಿಮಾನಿಗಳಿಗೆ ಸ್ವಲ್ಪ ಮಟ್ಟಿಗೆ ಶಾಕ್ ನೀಡಿದ್ದಾರೆ.