ತುಳು ಸಿನಿಮಾ ನೋಡ.. ನೋಡುತ್ತಿದ್ದಂತೆ ಸಿನಿಮಾ ರಂಗದಲ್ಲಿ ತನ್ನದೇ ಆದ ಹೊಸ ಅಲೆಯನ್ನು ಮೂಡಿಸಿದೆ. ಈಗ ತಾನೆ ಬೆಳೆಯುತ್ತಿರುವ ತುಳುಚಿತ್ರರಂಗ ಇತರ ಭಾಷೆಯ ಚಿತ್ರರಂಗಕ್ಕೂ ನಟ ನಟಿಯರನ್ನು ನೀಡಿದ ಕೀರ್ತಿಯಿದೆ. ಇಲ್ಲಿನ ಅದೆಷ್ಟೋ ನಟಿಯರು ಇತರ ಚಿತ್ರರಂಗದಲ್ಲಿ ಅನೇಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದೇ ರೀತಿ ನಮ್ಮ ಮಂಗಳೂರಿನಲ್ಲೊಬ್ಬಳು “ಚಾಂದಿನಿ ಅಂಚನ್” ಎಂಬ ಚೆಂದುಳ್ಳಿ ಚೆಲುವೆ ಸದ್ದಿಲ್ಲದೆ ಪಕ್ಕದ ತೆಲುಗು ಚಿತ್ರರಂಗದಲ್ಲಿ ಅಭಿನಯಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾಳೆ. ಯಾರು ಈ ಚಾಂದಿನಿ ಅಂಚನ್ ಅನ್ನುವ ಕುತೂಹಲ ನಿಮ್ಮಲ್ಲಿದ್ದರೆ… ಬನ್ನಿ ಇವರ ಜೊತೆ ನ್ಯೂಸ್ ಕನ್ನಡ ನಡೆಸಿದ ಹರಟೆ ಹೀಗಿದೆ.
1.ತುಳುನಾಡಿನ ಬೆಡಗಿಯಾಗಿರುವ ನೀವು ತುಳು ಸಿನಿಮಾದಲ್ಲಿ ಅಭಿನಯಿಸಲು ಆಸಕ್ತಿ ಹೊಂದಿದ್ದೀರಾ?
ತುಳುನಾಡಿನ ಹುಡುಗಿಯಾದ ನಾನು ಖಂಡಿತವಾಗಿಯು ತುಳು ಸಿನಿಮಾದಲ್ಲಿ ಅಭಿನಯಿಸುತ್ತೇನೆ. ಒಳ್ಳೆಯ ಸ್ಕ್ರಿಪ್ಟ್ ಮತ್ತು ಕಥೆಗೆ ಅನುಸಾರವಾಗಿ ನನ್ನ ಆಯ್ಕೆಯಾಗಿರುತ್ತದೆ.
2.ಈಗಾಗಲೇ ತೆಲುಗು ಸಿನಿಮಾ ರುದ್ರ ಐಪಿಎಸ್’ಚಿತ್ರದಲ್ಲಿ ನಟಿಸಿದ್ದೀರಿ ಹೇಗಿದೆ ಅಲ್ಲಿನ ಚಿತ್ರರಂಗ ? ಭಾಷಾ ಸಮಸ್ಯೆ ಎದುರಿಸಿದ್ದೀರಾ?
ಬಾಲಕೃಷ್ಣ ರೆಡ್ಡಿ ನಿರ್ದೇಶನದ ತೆಲುಗು ಚಲನಚಿತ್ರ ‘ರುದ್ರ ಐಪಿಎಸ್’ ಇದು ನನ್ನ ಮೊದಲ ಚಿತ್ರ . ಈ ಚಿತ್ರದಲ್ಲಿ ರಾಜಶೇಖರ ರೆಡ್ಡಿ ನಾಯಕನಾಗಿದ್ದು, “ರುದ್ರ ಐಪಿಎಸ್” ಚಿತ್ರದಲ್ಲಿ ನಾನು ಗ್ಲಿಟ್ಜ್ಹೀ ಗ್ಲಾಮರ್ ಜಗತ್ತಿಗೆ ನನ್ನನು ಒಡ್ಡಲು ಅವಕಾಶ ಸಿಕ್ಕಿತು. ಹೌದು ಮೊದಲು ನಾನೂ ಕೂಡ ಭಾಷಾ ಸಮಸ್ಯೆ ಎದುರಿಸಿದ್ದೆ. ಆದರೆ ಒಳ್ಳೆಯ ಚಿತ್ರತಂಡ ನನಗೆ ಸಿಕ್ಕಿದ್ದು, ಇದರಿಂದ ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯವಾಯ್ತು,. ನಿಸ್ಸಂಶಯವಾಗಿ ಎಲ್ಲಾ ಕ್ರೆಡಿಟ್ ಇಡೀ, “ರುದ್ರ ಐಪಿಎಸ್ “ ಚಿತ್ರರಂಗಕ್ಕೆ ಸಲ್ಲುತ್ತದೆ.
3.ನೀವು ನಾಯಕಿಯಾಗುವ ಕನಸು ಕಂಡಿದ್ರಾ?
ಹೌದು, ನನಗೆ ನಾಯಕಿಯಾಗುವ ಕನಸು ಮೊದಲಿನಿಂದಲೂ ಇತ್ತು. ನನ್ನ ತಾಯಿಯ ಬೆಂಬಲದ ಮೂಲಕ ತೆಲುಗು ಚಿತ್ರ ‘ರುದ್ರ ಐಪಿಎಸ್’ ನಲ್ಲಿ ಒಂದು ಒಳ್ಳೆಯ ಅವಕಾಶ ಸಿಕ್ಕಿತು. ಹಾಗೆನೇ ಮಾಡೆಲಿಂಗ್ ನ ನಾಲ್ಕು ವರ್ಷಗಳ ಕಠಿಣ ಶ್ರಮದಿಂದ ಯಶಸ್ಸು ಕಂಡಿದ್ದೇನೆ.
4.ಕನ್ನಡದಲ್ಲಿ ಹೀರೋಯಿನ್ ಆಗಿ ಚಿತ್ರವೊಂದಕ್ಕೆ ಆಯ್ಕೆಯಾಗಿದ್ದೀರಿಯಂತೆ. ಹೇಗನಿಸುತ್ತಿದೆ?
ಹೌದು, ಒಂದು ಉತ್ತಮವಾದ ಪ್ರಯತ್ನ ಇದನ್ನು ನಾನು ಸಾವಲಾಗಿ ಸ್ವೀಕರಿಸುತ್ತೇನೆ.
5.ಸಿನಿಮಾ ಜರ್ನಿ ?
ನನ್ನ ಸಿನಿ ಕೆರಿಯರ್ ಒಂದು ತುಳು ಆಲ್ಬಂನಿಂದ ಪ್ರಾರಂಭವಾಗಿ, ಮುಂಬೈಯ ಪ್ರಸಿದ್ಧ ಫ್ಯಾಶನ್ ಟಿ.ವಿಯ ಜಾಹಿರಾತಿನಲ್ಲಿ ಸೇರಿದಂತೆ, ಹೆಸರಾಂತ ಕನ್ನಡ ಮ್ಯಾಗಜ್ಹೀನ್ ‘ಸಖಿ’ಯ ಮುಖಪುಟದಲ್ಲಿ ಕಾಣುವ ಅವಕಾಶ ಸಿಕ್ಕಿತ್ತು. ಹೀಗೆ ನನ್ನ ಸಿನಿ ಕೆರಿಯರ್ ಪ್ರಾರಂಭವಾಯ್ತು.
6.ಚಿತ್ರರಂಗದಲ್ಲಿ ಬೆಳೆಯಲು ನಿಮ್ಮ ಪ್ರಕಾರ ಏನೆಲ್ಲಾ ಅವಶ್ಯಕತೆಯಿದೆ ?
ಸಿನಿಮಾ ಜಗತ್ತು ನನ್ನ ಮೊದಲ ಆಯ್ಕೆ. ನಂಬಿಕೆ ಮತ್ತು ಕಠಿಣ ಪರಿಶ್ರಮ ಸಿನಿಮಾ ರಂಗದ ಯಶಸ್ಸಿಗೆ ಅಗತ್ಯ ಎಂಬುದು ನನ್ನ ಅನಿಸಿಕೆ.