ಚಿಕ್ಕ ವಯಸ್ಸಿನಲ್ಲೇ ನಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ಆ ಅನುಭವ ನೋವು ಹೇಳಲಾಗದ್ದು ಎಂದು ಹೇಳುವ ಮೂಲಕ ಸೋನಮ್ ಕಪೂರ್ ತನ್ನ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಅನಿಲ್ ಕಪೂರ್ ರಂತಹ ಸ್ಟಾರ್ ಮಗಳು ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವೆ ಎಂದು ಹೇಳಿದ್ದು, ಎಲ್ಲವನ್ನು ನೇರವಾಗಿ ಹೇಳುವ ದಿಟ್ಟತನ ಹೊಂದಿರುವ ಸೋನಮ್ ಇದೀಗ ತಾನು ಚಿಕ್ಕಂದಿನಲ್ಲಿ ಅನುಭವಿಸಿದ ನೋವನ್ನು ಹೇಳಿದ್ದಾರೆ.
2016ರ ಹಿಟ್ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದ ನಟಿಯರಾದ ಅನುಷ್ಕಾ ಶರ್ಮ, ವಿದ್ಯಾಬಾಲನ್, ರಾಧಿಕಾ ಆಪ್ಟೆ, ಅಲಿಯಾಭಟ್ ಅವರೊಂದಿಗೆ ಚಿತ್ರ ವಿಮರ್ಶಕ ರಾಜೀವ್ ಮಸಂದ್ ರೌಂಡ್ ಟೇಬಲ್ ಕಾನ್ಫರೆನ್ಸ್ ಏರ್ಪಡಿಸಿ ಮಾತನಾಡುತ್ತಿದ್ದ ಸಂಧರ್ಭ ಸೋನಂ ಕಪೂರ್ ಈ ರೀತಿ ಹೇಳಿದ್ದಾರೆ.