ಕನ್ನಡ ಚಿತ್ರರಂಗದ ಬಹುನಿರೀಕ್ಷೆಯ ಚಿತ್ರ ‘ಚೌಕ’ ಈಗಾಗಲೇ ಚಿತ್ರರಸಿಕರಲ್ಲಿ ಅನೇಕ ಕುತೂಹಲ ಕೆರಳಿಸಿದ್ದು, ಇದೀಗ ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದ್ದು, ಎಲ್ಲೆಡೆಯು ಭರ್ಜರಿ ಸೌಂಡ್ ಮಾಡುತ್ತಿದೆ.
ಸೋನು ನಿಗಮ್ ಮತ್ತು ಅಂತರಾ ಮಿತ್ರ ಅವರು ಹಾಡಿರುವ “ತುರ್ತಿನಲ್ಲಿ ಗೀಚಿದ…” ಎನ್ನುವ ಹಾಡು ಬಿಡುಗಡೆಯಾಗಿದೆ. ಬಾಲಿವುಡ್ನ ಖ್ಯಾತ ಗಾಯಕಿ ಅಂತರಾ ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಈ ಹಾಡಿನ ಮೂಲಕ ಪಾದಾರ್ಪಣೆ ಮಾಡಿದ್ದಾರೆ.
ನಾಲ್ಕು ಪ್ರೇಮಿಗಳ ಲವ್ ಸ್ಟೋರಿಯನ್ನು ಹೇಳುವ ಈ ಹಾಡಿಗೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದು, ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.
ನೆನಪಿರಲಿ ಪ್ರೇಮ್, ದಿಗಂತ್, ಪ್ರಜ್ವಲ್ ದೇವರಾಜ್, ವಿಜಯ ರಾಘವೇಂದ್ರ, ಚಿತ್ರದ ನಾಯಕರಾಗಿದ್ದು, ಪ್ರಿಯಾಮಣಿ, ಐಂದ್ರಿತಾ ರೇ, ದೀಪಾ ಸನ್ನಿಧಿ ಮತ್ತು ಭಾವನಾ ಚಿತ್ರದಲ್ಲಿ ನಾಯಕಿಯರಾಗಿ ಬಣ್ಣಹಚ್ಚಿದ್ದಾರೆ. ತರುಣ್ ಸುಧೀರ್ ಕಿಶೋರ್ ನಿರ್ದೇಶನ ಈ ಚಿತ್ರಕ್ಕಿದ್ದು, ಇದರ ಮತ್ತೊಂದು ವಿಶೇಷತೆಯೆಂದರೆ ದ್ವಾರಕೀಶ್ ಚಿತ್ರ ನಿರ್ಮಾಣದ 50 ನೇ ಚಿತ್ರ ಇದಾಗಿದೆ.