ಮುಂಬಯಿ: ಇತ್ತೀಚೆಗೆ ಬಿಡುಗಡೆಯಾದ ಅಮೀರ್ ಖಾನ್ ಅಭಿನಯದ ‘ದಂಗಲ್’ ಸಿನಿಮಾವು, ಸೂಪರ್ ಹಿಟ್ ಸಿನಿಮಾ ‘ಸುಲ್ತಾನ್’ ಗಿಂತ ಅತ್ಯುತ್ತಮ ಚಿತ್ರವೆಂದು, ಚಿತ್ರ ನೋಡಿದ ಬಳಿಕ ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಹೇಳಿದ್ದಾರೆ.
ದಂಗಲ್ ಚಿತ್ರವು ತಾನು ನಟಿಸಿರುವ ‘ಸುಲ್ತಾನ್’ಗಿಂತ ಅತ್ಯುತ್ತಮವಾಗಿದೆ ಎಂದು ಸಲ್ಮಾನ್ ಖಾನ್ ಟ್ಟೀಟ್ ಮಾಡಿದ್ದಾರೆ. ‘ಸುಲ್ತಾನ್’ ಚಿತ್ರದಲ್ಲಿ ಸಲ್ಮಾನ್ ಹರ್ಯಾಣದ ಕುಸ್ತಿ ಪೈಲ್ವಾನ್ ಪಾತ್ರ ನಿರ್ವಹಿಸಿದ್ದು, ಅಲಿ ಅಬ್ಬಾಸ್ ಜಫರ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು.
ನಾನು ವೈಯಕ್ತಿಕವಾಗಿ ನಿಮ್ಮನ್ನು ಪ್ರೀತಿಸುತ್ತೇನೆ ಅಮಿರ್, ಆದರೆ ವೃತ್ತಿಗತವಾಗಿ ನಿಮ್ಮನ್ನು ದ್ವೇಷಿಸುತ್ತೇನೆ. ನನ್ನ ಕುಟುಂಬ ‘ದಂಗಲ್’ ಸಿನಿಮಾ ನೋಡಿದ್ದು, ಈ ಚಿತ್ರ ‘ಸುಲ್ತಾನ್’ ಗಿಂತ ಅತ್ಯದ್ಭುತವಾಗಿ ಮೂಡಿ ಬಂದಿದೆ. ಎಂದು ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದು, ಇದಕ್ಕೆ ಪ್ರತಿಯಾಗಿ ಅಮೀರ್ ಖಾನ್, ರಿಟ್ವೀಟ್ ಮಾಡಿದ್ದು, ಸಲ್ಮಾನ್ ಖಾನ್ ನಿಮ್ಮ ದ್ವೇಷದಲ್ಲಿ ನನಗೆ ಕೇವಲ ಪ್ರೀತಿ ಮಾತ್ರ ಕಾಣುತ್ತದೆ ಎಂದಿದ್ದಾರೆ.