ಹೊಸದಿಲ್ಲಿ: ಫೋರ್ಬ್ಸ್ ಇಂಡಿಯಾ 100 ಜನರ ತಾರಾಪಟ್ಟಿಯಲ್ಲಿ 270.33 ಕೋಟಿ ಆದಾಯದೊಂದಿಗೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮೊದಲನೇ ಸ್ಥಾನದಲ್ಲಿದ್ದಾರೆ.
ಈ ಮೂಲಕ ಸಲ್ಮಾನ್ ಖಾನ್ ಅವರು ಶಾರುಖ್ ಖಾನ್ ಅವರನ್ನು ಎರಡನೇ ಸ್ಥಾನಕ್ಕೆ ಸರಿಗಟ್ಟಿದ್ದು, ಶಾರುಖ್ ಅವರ ಆದಾಯ 221.75 ಆಗಿದೆ. ನಂತರದ ಸ್ಥಾನದಲ್ಲಿ 133.44 ಕೋಟಿ ಆದಾಯದ ಮೂಲಕ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ 4 ನೇ ಸ್ಥಾನದಲ್ಲಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್, 122.48 ಕೋಟಿ ಆದಾಯದೊಂದಿಗೆ 5ನೇ ಸ್ಥಾನದಲ್ಲಿ ಮಹೇಂದ್ರ ಸಿಂಗ್ ಧೋನಿ ಇದ್ದಾರೆ.
ದೀಪಿಕಾ ಪಡುಕೋಣೆ (೬), ಸಚಿನ್ ತೆಂಡೂಲ್ಕರ್ (೭), ಪ್ರಿಯಾಂಕಾ ಚೋಪ್ರಾ (೮). ಅಮಿತಾಬ್ ಬಚ್ಚನ್ (೯) ಮತ್ತು ಹೃತಿಕ್ ರೋಷನ್ (೧೦) ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.