ಮುಂಬಯಿ: ಸಿನಿಮಾಗಳ ಆಯ್ಕೆ ಮೊದಲಿನಂತ ಇದೆ. ಆದರೆ ಮಾಡುವ ಕೆಲಸದ ವೈಖರಿ ಬದಲಾಗಿದೆ. ಪಾತ್ರದ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಆದರೇ ಬದಲಾವಣೆ ಆಗಿರುವುದು ವಯಸ್ಸಿನಲ್ಲಿ ಎಂದು ಬಾಲಿವುಡ್ ಬಿಗ್ -ಬಿ ಅಮಿತಾಬ್ ಬಚ್ಚನ್ ಹೇಳಿದ್ದಾರೆ ಹೇಳಿದ್ದಾರೆ.
ಸಾಮಾಜಿಕ ಕಳಕಳಿಯುಳ್ಳ ಪಾತ್ರದಲ್ಲಿ ಪಾತ್ರದಲ್ಲಿ ನನ್ನ ವಯಸ್ಸಿಗೆ ತಕ್ಕಂತ ನಿರ್ಣಾಯಕ ಪಾತ್ರಗಳನ್ನು ನಾನು ಆಯ್ಕೆ ಮಾಡಿಕೊಳ್ಳುತ್ತೇನೆ. ನಾನು ಒಬ್ಬ ನಟನಾಗಿ ನಿರ್ಧಿಷ್ಟ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಬೇಕು, ನಾನು ಉತ್ತಮವಾದದ್ದನ್ನೇ ಮಾಡಲು ಪ್ರಯತ್ನಿಸುತ್ತಿರುತ್ತೇನೆ. ನಾನು ಮಾಡುವ ಕೆಲಸ ನನಗೆ ತೃಪ್ತಿ ನೀಡಬೇಕು ಎಂದು ಹೇಳಿರುವ ಅಮಿತಾಬ್ ದೀವಾರ್, ಜಂಝೀರ್, ಡಾನ್ ಮತ್ತು ಶೋಲೆ ಚಿತ್ರಗಳಲ್ಲಿನ ತಮ್ಮ ಪಾತ್ರದ ಬಗ್ಗೆ ಮೆಲುಕು ಹಾಕಿದ್ದಾರೆ.
2017 ನೇ ವರ್ಷಕ್ಕೆ ನಿಮ್ಮ ನಿರ್ಣಯ ಏನು ಎಂಬ ಪ್ರಶ್ನೆಗೆ ಉತ್ತರಿಸಿರರುವ ಅಮಿತಾಬ್, ವೃತ್ತಿ ಬದುಕಿನಲ್ಲಿ ಹಾಗೂ ವಯಕ್ತಿಕ ಬದುಕಿನಲ್ಲಿ ನಾನು ಯಾವುದೇ ನಿರ್ಣಯ ಕೈಗೊಳ್ಳುವ ಅವಶ್ಯಕತೆಯಿಲ್ಲ, ಅಂದುಕೊಂಡಿದ್ದನ್ನು ಮಾಡಲು ಏಕೆ ವರ್ಷಗಟ್ಟಲೇ ಕಾಯಬೇಕು, ನಮಗೆ ಬೇಕಾದಾಗ ಅವಶ್ಯಕವಿರುವ ಕೆಲಸವನ್ನು ಮಾಡಬೇಕು , ಹೀಗಾಗಿ ನಾನು ಯ.ಾವ ನಿರ್ಣಯ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.