ಬೆಂಗಳೂರು: ವಿಚ್ಚೇದನಕ್ಕೆ ಮುಂದಾಗಿದ್ದ ಸ್ಯಾಂಡಲ್ ವುಡ್ ಖ್ಯಾತ ನಟ ಕಿಚ್ಚ ಸುದೀಪ್ ಹಾಗೂ ಪ್ರಿಯಾ ದಂಪತಿ ಪತ್ತೆ ಒಂದಾಗುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಂದರಲ್ಲಿ ಕೇಳಿ ಬರುತ್ತಿದೆ.
ಕಾರಣಾಂತರಗಳಿಂದ ಪತ್ನಿ ಪ್ರಿಯರೊಂದಿಗಿನ ಸಂಬಂಧ ಕಡಿದುಕೊಂಡು ವಿಚ್ಛೇಧನಕ್ಕೆ ಮುಂದಾಗಿದ್ದ ನಟ ಕಿಚ್ಚ ಸುದೀಪ್ ಇದೀಗ ಮತ್ತೆ ಒಂದಾಗಲು ನಿರ್ಧರಿಸಿದ್ದಾರಂತೆ. ಈ ಬಗ್ಗೆ ಈಗಾಗಲೇ ಸುದ್ದಿ ಹರಡಿದ್ದು, ಪ್ರಮುಖವಾಗಿ ತಮ್ಮ ಅಚ್ಚುಮೆಚ್ಚಿನ ಪುತ್ರಿ ಸಾನ್ವಿಗಾಗಿ ಸುದೀಪ್ ಮತ್ತು ಪ್ರಿಯಾ ಜೋಡಿ ಒಂದಾಗುತ್ತಿದ್ದು, ಕೂಡಿ ಬಾಳುವ ನಿರ್ಧಾರಕ್ಕೆ ಬಂದಿದ್ದಾರಂತೆ. ಇದೇ ಕಾರಣಕ್ಕೆ ಇತ್ತೀಚೆಗೆ ನಡೆದ ವಿಚ್ಧೇದನ ಅರ್ಜಿಯ ನ್ಯಾಯಾಲಯದ ವಿಚಾರಣೆಗೆ ಇಬ್ಬರೂ ಗೈರಾಗಿದ್ದರು ಎಂದು ಹೇಳಲಾಗುತ್ತಿದೆ.
ಈ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ರವರು ದಂಪತಿಗಳಿಬ್ಬರನ್ನು ಒಟ್ಟಿಗೆ ಕೂರಿಸಿ ಮಾತುಕತೆ ನಡೆಸಿದ್ದು ಎಲ್ಲರಿಗೂ ತಿಳಿದ ವಿಷಯ. ಆ ನಂತರ ಅಂದರೆ 2016ರ ಮೇ ತಿಂಗಳಲ್ಲಿ ನಡೆದ ಜಿಗರ್ ತಂಡ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಸುದೀಪ್ ಮತ್ತು ಪ್ರಿಯಾ ಜೋಡಿ ಪರಸ್ಪರ ಮಾತುಕತೆ ಮೂಲಕ ತಮ್ಮ ನಡುವೆ ಇದ್ದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಿದ್ದು, ಮತ್ತೆ ಒಂದಾಗುವ ಮುನ್ಸೂಚನೆ ನೀಡಿದ್ದಾರಂತೆ.