ಇತ್ತೀಚೆಗೆ ತೆರೆಕಂಡಿದ್ದ, ತರ್ಲೇ ವಿಲೇಜ್ ಚಿತ್ರದ ಗೆಲುವಿನ ನಂತರ, ಸಿನಿಮಾ ನಿರ್ದೇಶಕ ಕೆ.ಎಂ ರಘು ಅವರು ಹೊಸ ಸಿನಿಮಾವೊಂದನ್ನು ನಿರ್ದೇಶನಕ್ಕೆ ಕೈ ಹಾಕಿದ್ದಾರೆ.
ಸಿನಿಮಾಕ್ಕೆ “ಗೆಂಡೆ ತಿಮ್ಮ” ಎಂದು ಹೆಸರಿಡಲಾಗಿದ್ದು, ಸಿನಿಮಾ ಹಾಸನದ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯನ್ನು ಆಧಾರಿಸಿದ್ದು ಎನ್ನಲಾಗಿದೆ.
ಇನ್ನೂ ಸಿನಿಮಾಕ್ಕೆ ರಮೇಶ್ ಕಶ್ಯಪ್ ಅವರು ನಿರ್ಮಾಣದ ಒಂಬತ್ತನೇ ಸಿನಿಮಾ ಇದಾಗಿದ್ದು, ಕಥೆ ಚಿತ್ರಕಥೆ, ಸಂಭಾಷಣೆ, ಮತ್ತು ನಿರ್ದೇಶನದ ಹೊಣೆಯನ್ನು ರಘು ಅವರೇ ಹೊತ್ತಿದ್ದಾರೆ. ಇನ್ನೂ ಸಿನಿಮಾದ ತಾರಬಳಗದ ಆಯ್ಕೆ ನಡೆಯಬೇಕಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಇದೇ ವೇಳೆ ಕನ್ನಡ ಸಿನಿಮಾ ಲೋಕಕ್ಕೆ ಹೊಸ ಭಾಷ್ಯ ಬರೆದು, ಲೋಕೇಶ್ ಅವರ ಅಭಿನಯದಲ್ಲಿ ತೆರೆಕಂಡ ‘ಪರಸಂಗದ ಗೆಂಡೆತಿಮ್ಮ’ನಿಗೂ 2017ರಲ್ಲಿ ನಿರ್ಮಾಣವಾಗುತ್ತಿರುವ ಈ ‘ಗೆಂಡೆತಿಮ್ಮ’ನಿಗೂ ಯಾವುದೇ ಸಂಬಂಧವಿಲ್ಲ, ಸಿನಿಮಾದ ಕಥೆಗೆ ಈ ಟೈಟಲ್ ಸೂಕ್ತ ಅನ್ನಿಸುತ್ತು ಹಾಗಾಗಿ ಇಟ್ಟೆ ಎನ್ನುತ್ತಾರೆ ನಿರ್ದೇಶಕ ರಘು.
ಕಲಾವಿದರ ಆಯ್ಕೆ ಪ್ರಕ್ರಿಯೆ ಶುರುವಾಗಿದ್ದು ಅದಾದ ಬಳಿಕ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ ಎಂದು ತಿಳಿಸಿದ್ದಾರೆ.