2015ರ ಎಬಿಸಿ ಥ್ರಿಲ್ಲರ್ ಸೀರಿಸ್ ಕ್ವಾಂಟಿಕೋ ದಲ್ಲಿನ ಅಲೆಕ್ಸ್ ಪ್ಯಾರಿಶ್ ಪಾತ್ರಕ್ಕಾಗಿ 2017ರ ಪೀಪಲ್ಸ್ ಚಾಯ್ಸ್ ಪ್ರಶಸ್ತಿಯನ್ನು ಪ್ರಿಯಾಂಕಾ ಚೋಪ್ರಾ ತನ್ನದಾಗಿಸಿಕೊಂಡಿದ್ದಾರೆ.
ಕ್ಯಾಲಿಫೋರ್ನಿಯದ ಲಾಸ್ ಏಂಜಲಿಸ್ನಲ್ಲಿನ ಮೈಕ್ರೋಸಾಫ್ಟ್ ಥಿಯೇಟರ್ನಲ್ಲಿ ನಿನ್ನೆ ನಡೆದ 43ನೇ ಪೀಪಲ್ಸ್ ಚಾಯ್ಸ್ ಸಮಾರಂಭದಲ್ಲಿ ವೀಕ್ಷಕರ ಅಚ್ಚುಮೆಚ್ಚಿನ ನಾಟಕೀಯ ಟಿವಿ ತಾರೆ ಎಂಬ ಹೆಗ್ಗಳಿಕೆಗೆ ಪ್ರಿಯಾಂಕಾ ಪಾತ್ರರಾಗಿದ್ದಾರೆ.
ಈ ಮೂಲಕ ಅಮೆರಿಕನ್ ನೆಟ್ವರ್ಕ್ ಸೀರಿಸ್ನಲ್ಲಿ ಭಾರೀ ಹೆಡ್ಲೈನ್ ಖ್ಯಾತಿಗೆ ಪಾತ್ರಳಾದ ಮೊತ್ತ ಮೊದಲ ದಕ್ಷಿಣ ಏಶ್ಯದ ಮಹಿಳೆ ಎಂಬ ಗೌರವಕ್ಕೂ ಪ್ರಿಯಾಂಕಾ ಭಾಜನರಾಗಿದ್ದಾರೆ.
2015ರ ಎಬಿಸಿ ಥ್ರಿಲ್ಲರ್ ಸೀರಿಸ್ ಕ್ವಾಂಟಿಕೋ ಎಂಬ ರೋಚಕ ಟಿವಿ ಸೀರಿಯಲ್ನಲ್ಲಿ ಅಲೆಕ್ಸ್ ಪ್ಯಾರಿಶ್ ಪಾತ್ರ ಅಪಾರ ಜನಮನ್ನಣೆ ಪಡೆದಿತ್ತು. ಈ ಪಾತ್ರದ ಮೂಲಕ ಪ್ರಿಯಾಂಕಾ ಚೋಪ್ರಾ ಅಂತಾರಾಷ್ಟ್ರೀಯ ಪ್ರಸಿದ್ಧಿಗೆ ಬಂದಿದ್ದರು