ಇತ್ತೀಚಿನ ಸೂಪರ್ ಹಿಟ್ ತುಳು ಚಿತ್ರ ‘ಪಿಲಿಬೈಲ್ ಯಮುನಕ್ಕ’ ದ ಯಶಸ್ಸಲ್ಲಿ ಬೀಗುತ್ತಿರುವ ಲಕುಮಿ ತಂಡ ತಮ್ಮ ಹೊಸ ಸಿನೆಮಾದ ಶೀರ್ಷಿಕೆಯನ್ನು ಪೋಸ್ಟರ್ ಸಮೇತ ಬಿಡುಗಡೆಗೊಳಿಸಿದ್ದಾರೆ.
ಈವರೆಗೆ ಬಂದಿರುವ ಸಿನೆಮಾಗಳಿಗಿಂತ ವಿಭಿನ್ನವಾಗಿ ಕಾಣುವ ಹೊಸ ಸಿನೆಮಾ ‘ಮೈ ನೇಮ್ ಈಸ್ ಅಣ್ಣಪ್ಪ’ ವನ್ನು ಪಿಲಿಬೈಲ್ ಯಮುನಕ್ಕ ಸಿನೆಮಾದ ಸಹ-ನಿದರ್ೇಶಕ ಹಾಗೂ ಗೀತೆ ರಚನೆಕಾರ ಮಯೂರ್ ಶೆಟ್ಟಿ ನಿರ್ದೇಶಿಸಲಿದ್ದಾರೆ. ಪಿಲಿಬೈಲ್ ಮಾತ್ರವಲ್ಲದೆ ಹಲವಾರು ಸಿನೆಮಾಗಳಲ್ಲಿ ದುಡಿದಿರುವ ಮಯೂರ್ ಶೆಟ್ಟಿಯವರು ಹೇಳುವಂತೆ ಅಣ್ಣಪ್ಪ ಸಿನೆಮಾವು ಸಂಪೂರ್ಣ ಹಾಸ್ಯದೊಂದಿಗೆ ಒಂದು ವಿಭಿನ್ನವಾದ ಕಥೆಯನ್ನು ಕೂಡ ಹೊಂದಿದೆ. ಪಿಲಿಬೈಲ್ ಯಮುನಕ್ಕದ ಬಹುತೇಕ ಕಲಾವಿದರೇ ‘ಮೈ ನೇಮ್ ಈಸ್ ಅಣ್ಣಪ್ಪ’ ದಲ್ಲೂ ಇರಲಿದ್ದು ತಾಂತ್ರಿಕ ತಂಡದಲ್ಲಿ ಸ್ವಲ್ಪ ಬದಲಾವಣೆಯಳಾಗಲಿವೆಯಂತೆ.
ಲಕುಮಿ ತಂಡದ ಎಕ್ಕಸಕ ಮತ್ತು ಪಿಲಿಬೈಲ್ ಯಮುನಕ್ಕ ಸಿನೆಮಾಗಳು ಸೂಪರ್ ಹಿಟ್ ಆದ ಹಿನ್ನೆಲೆಯಲ್ಲಿ ಅಣ್ಣಪ್ಪನ ಮೇಲೆ ಸಹಜವಾಗಿ ನಿರೀಕ್ಷೆಗಳು ಗರಿಗೆದರಿವೆ. ಈ ನಿಟ್ಟಿನಲ್ಲಿ ಹಳಸಲು ಹಾಸ್ಯ ಮತ್ತು ಹಳೇ ಕಥೆಗಳನ್ನು ನೋಡಿ ಬೇಸತ್ತ ತುಳು ಪ್ರೇಕ್ಷಕನಿಗೆ ‘ಮೈ ನೇಮ್ ಈಸ್ ಅಣ್ಣಪ್ಪ’ ಹೊಸತನ್ನು ನೀಡಲಿ ಎಂಬುದು ‘ನ್ಯೂಸ್ ಕನ್ನಡ’ದ ಆಶಯ.