News Kannada
Thursday, December 08 2022

ಮನರಂಜನೆ

ಇಂದು ಗಡ್ಡಪ್ಪ ಸರ್ಕಲ್ ಆಡಿಯೋ ರೀಲಿಸ್

Photo Credit :

ಇಂದು ಗಡ್ಡಪ್ಪ ಸರ್ಕಲ್ ಆಡಿಯೋ ರೀಲಿಸ್

ಮೈಸೂರು: ತಿಥಿ ಖ್ಯಾತಿಯ ಸೆಂಚುರಿಗೌಡ ಹಾಗೂ ಗಡ್ಡಪ್ಪ ವಿಭಿನ್ನ ಗೆಡೆಪ್ ನಲ್ಲಿ ಕಾಣಿಸಿಕೊಂಡು ಅಭಿನಯಸಿರುವ ಗಡ್ಡಪ್ಪ ಸರ್ಕಲ್ ಚಿತ್ರದ ಆಡಿಯೋವನ್ನ ನಗರದ ಗಾನ ಭಾರತಿ ಸಭಾಂಗಣದಲ್ಲಿ 5 ಜನ ಹಿರಿಯರಿಂದ ವಿಭಿನ್ನವಾಗಿ ಬಿಡುಗಡೆ ಮಾಡಿಸಲಾಯಿತು.


ತಿಥಿ ಹಾಗೂ ತರ್ಲೆ ವಿಲೇಜ್ ಚಿತ್ರಗಳಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಗ್ರಾಮ್ಯ ಶೈಲಿಯ ಸಂಭಾಷಣೆಗೆ ಹೊಸ ರೂಪ ಕೊಟ್ಟಿರುವ ಗಡ್ಡಪ್ಪ ಹಾಗೂ ಸೆಂಚುರಿ ಗೌಡ ಹೊಸ ಗೆಟಪ್ನಲ್ಲಿ ಇಷ್ಟರಲ್ಲೇ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಟ್ರೇಲರ್ಗೆ ಪ್ರೇಕ್ಷಕರು ತಲೆದೂಗಿದ್ದು ಹೊಸ ಗೆಟಪ್ನಲ್ಲಿ ಕಾಣಿಸಿಕೊಂಡಿರುವ ಗಡ್ಡಪ್ಪ ಆಡಿಯೋ ರಿಲೀಸ್ ಬಳಿಕ ಸಂತಸ ವ್ಯಕ್ತಪಡಿಸಿದರು.

ಚಿತ್ರದ ಹೈಲೈಟ್ ಆಗಿರುವ ಇಬ್ಬರೂ ನಾಯಕರು ಹಿರಿಯ ನಾಗರಿಕರೇ ಆಗಿರುವ ಕಾರಣ ಚಿತ್ರತಂಡ ಹಿರಿಯ ನಾಗರಿಕರ ಮೂಲಕವೇ ಆಡಿಯೋ ಲೋಕಾರ್ಪಣೆ ಮಾಡಿಸುವ ವಿನೂತನ ಪ್ರಯತ್ನ ಮಾಡಿತು. ನಂತರ ಚಿತ್ರದಲ್ಲಿ ಮೂಡಿಬಂದಿರುವ ಎರಡು ಹಾಡಿನ ದೃಶ್ಯಗಳನ್ನೂ ತೋರಿಸಲಾಯಿತು. ಈ ಚಿತ್ರದಲ್ಲಿ ಗಡ್ಡಪ್ಪ-ಸೆಂಚುರಿಗೌಡರಿಬ್ಬರ ಗೆಟಪ್ ಬದಲು ಮಾಡಿದ್ದರೂ ಅವರು ಅದಕ್ಕೆ ತಕ್ಕಂತೆ ನಟಿಸಿದ್ದಾರೆ. ಚಿತ್ರದ ವಿವಿಧ ಪಾತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ಚಿತ್ರ ಇನ್ನೂ ಮೂರ್ನಾಲ್ಕು ವಾರಗಳಲ್ಲಿ ತೆರೆಗೆ ಬರಲಿದ್ದು, ಹಿಂದಿನ ಎರಡು ಚಿತ್ರಗಳಂತೆ ಈ ಚಿತ್ರವೂ ಸಹ ಯಶಸ್ವಿಯಾಗುವ ವಿಶ್ವಾಸವಿದೆ ಅಂತಾ ಚಿತ್ರದ ನಿರ್ದೇಶಕ ಬಿ.ಆರ್. ಕೇಶವ್ ಹೇಳಿದರು.

ಗಡ್ಡಪ್ಪ ಸರ್ಕಲ್ನಲ್ಲಿ ಗಡ್ಡಪ್ಪ ಹಾಗೂ ಸೆಂಚುರಿಗೌಡರ ಭರ್ಜರಿ ಸಂಭಾಷಣೆಯಿದ್ದು, ಎಂದಿನ ಪಂಚಿಂಗ್ ಡೈಲಾಗ್ಗಳೇ ಚಿತ್ರದ ಹೈಲೈಟ್ ಆಗಿದೆ. ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ಅಭಿಷೇಕ್ ಮತ್ತು ಸುಕನ್ಯಾ ಡ್ಯೂಯೆಟ್ ಸಾಂಗ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಅಭಿನಯ ನನಗೆ ಹೊಸ ಅನುಭವ ನೀಡಿದೆ. ಗಡ್ಡಪ್ಪ ಅವರ ಜೊತೆ ಏಕಕಾಲಕ್ಕೆ ಎರಡು ಪಾತ್ರಗಳಲ್ಲಿ ಅಭಿನಯಿಸಿದ್ದು ನಿಜಕ್ಕೂ ಒಳ್ಳೆಯ ಅನುಭವ ಎಂದರು ನಾಯಕಿ ಸುಕನ್ಯಾ.

See also  ಅವನೇ ಶ್ರೀಮಾನ್ ನಾರಾಯಣ ಚಿತ್ರದ ಟ್ರೇಲರ್ ನ.28ಕ್ಕೆ ಬಿಡುಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು