News Kannada
Monday, February 06 2023

ಮನರಂಜನೆ

ಜನಮೆಚ್ಚುಗೆ ಗಳಿಸಿದ ‘ಶುದ್ಧಿ’ ಟ್ರೇಲರ್‌

Photo Credit :

ಜನಮೆಚ್ಚುಗೆ ಗಳಿಸಿದ 'ಶುದ್ಧಿ' ಟ್ರೇಲರ್‌

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ವಿಭಿನ್ನ ರೀತಿಯ ಚಿತ್ರಗಳು ತೆರೆಕಾಣುತ್ತಿದ್ದು, ಪ್ರೇಕ್ಷಕರೂ ಕೂಡ ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದು, ಇದೀಗ ಈ ಸಾಲಿಗೆ ಶುದ್ಧಿ ಚಿತ್ರವು ಸೇರ್ಪಡೆಯಾಗುವ ಲಕ್ಷಣಗಳು ಕಾಣುತ್ತಿವೆ.

ಮಾಜಿಕ ಮಾಧ್ಯಮಗಳಲ್ಲಿ ಶುದ್ಧಿ ಚಿತ್ರದ ಟ್ರೇಲರ್‌ ಸಖತ್ ಸದ್ದು ಮಾಡುತ್ತಿದ್ದು, ಫೆ.3ರಂದು ಬಿಡುಗಡೆಯಾಗಿರುವ ಈ ಚಿತ್ರದ ಟ್ರೇಲರ್ 2 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸುವ ಮೂಲಕ ಯೂಟ್ಯೂಬ್‌ ಟ್ರೆಂಡಿಂಗ್‌ ಲಿಸ್ಟ್ ನಲ್ಲಿ ಮೂರನೇ ಸ್ಥಾನವನ್ನು ಪಡೆದಿದೆ.

ನಿವೇದಿತಾ, ಲಾರೆನ್‌ ಸ್ಪಾರ್ಟೆನೋ ಹಾಗೂ ಅಮೃತಾ ಕರಗಡ ಈ ಚಿತ್ರದ ಪ್ರಮುಖ ಪಾತ್ರಧಾರಿಗಳು. ನಿರ್ದೇಶನದ ಜವಾಬ್ದಾರಿಯನ್ನು ಆದರ್ಶ್‌ ಎಚ್‌.ಈಶ್ವರಪ್ಪ ವಹಿಸಿದ್ದಾರೆ. ಆ್ಯಂಡ್ರೂ ಇಲೋ ಛಾಯಾಗ್ರಹಣ ಹಾಗೂ ಜೆಸ್ಸಿ ಕ್ಲಿಂಟನ್‌ ಸಂಗೀತ ಶುದ್ಧಿ ಚಿತ್ರಕ್ಕಿದೆ.

ಭಾರತದ ಪ್ರವಾಸದಲ್ಲಿರುವ ಅಮೆರಿಕ ಮೂಲದ ಮಹಿಳೆ ಮತ್ತು ಕಾನೂನು ಹೋರಾಟದಲ್ಲಿ ತೊಡಗಿರುವ  ಮಹಿಳಾ ಪತ್ರಕರ್ತರು ಚಿತ್ರದ ಪ್ರಮುಖ ಪಾತ್ರಗಳಾಗಿವೆ. ಭಿನ್ನ ಟ್ರೇಲರ್‌ ಮೂಲಕ ಗಮನ ಸೆಳೆಯುತ್ತಿರುವ ಈ ಚಿತ್ರ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಎಳೆಯಿರುವ ಸಿನಿಮಾವಾಗಿದೆ.

See also  ಅಯೋಗ್ಯನಿಗೆ ಡಿಂಪಲ್ ರಾಣಿ ರಚಿತಾ ರಾಮ್ ನಾಯಕಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು