ಉಡುಪಿ: ಕಿರಿಕ್ ಪಾರ್ಟಿ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಇಂದು ಕುಂದಾಪುರದ ಕೋಟೇಶ್ವರದಲ್ಲಿ ಪ್ರಗತಿ ಶೆಟ್ಟಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ತಾಯಿ ಆಯ್ಕೆ ಮಾಡಿರುವ ಉಡುಪಿ ಮೂಲದ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಪ್ರಗತಿ ಶೆಟ್ಟಿ ಜೊತೆ ಕುಂದಾಪುರದ ಸಹನಾ ಕಲ್ಯಾಣ ಮಂಟಪದಲ್ಲಿ ಸಂಪ್ರದಾಯ ಬದ್ಧವಾಗಿ ನೆರವೇರಿತು. ಗುರು ಹಿರಿಯರು ಬಂಧು ಬಳಗ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗುವ ಮೂಲಕ ರಿಷಭ್ ಹಾಗೂ ಪ್ರಗತಿ ಸತಿಪತಿಗಳಾದರು.
ಕಿರಿಕ್ ಪಾರ್ಟಿ, ರಿಕ್ಕೀ, ಉಳಿದವರು ಕಂಡಂತೆ, ತುಘಲಕ್ ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿರುವ ರಿಷಬ್ ಸದ್ಯದ ಸ್ಯಾಂಡಲ್ ವುಡ್ನ ಸಕ್ಸಸ್ಫುಲ್ ಡೈರೆಕ್ಟರ್ ಗಳಲ್ಲಿ ಒಬ್ಬರಾಗಿದ್ದಾರೆ. ಕಿಚ್ಚ ಸುದೀಪ್ ಮದುವೆಗೆ ಆಗಮಿಸಿ ನೂತನ ವಧು ವರರಿಗೆ ಶುಭ ಕೋರಿದರು. ತನ್ನ ಬೆಸ್ಟ್ ಫ್ರೆಂಡ್ ಮದುವೆಯಲ್ಲಿ ಕುಂದಾಪುರ ಶೈಲಿಯ ಪಂಚೆ ಶಲ್ಯ ತೊಟ್ಟು ನಟ ರಕ್ಷಿತ್ ಶೆಟ್ಟಿ ಎಲ್ಲರ ಗಮನ ಸೆಳೆದರು.