ಮೈಸೂರು: ಸಿನಿಮಾ ಒಂದು ಮಾಧ್ಯಮ ಇದ್ದ ಹಾಗೇ, ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚಿನ ಸಿನಿಮಾಗಳನ್ನ ನೋಡುತ್ತಿದ್ದಾರೆ, ಸಿನಿಮಾದಲ್ಲಿ ಬರುವ ಪ್ರತಿಯೊಂದು ಪಾತ್ರವನ್ನುಅನುಕರಿಸುತ್ತಾರೆ, ಆದರಿಂದ ಉತ್ತಮ ಚಿತ್ರಗಳು ಹೆಚ್ಚು ಬರಬೇಕೆಂದು ರಾಜ್ಯಪಾಲ ವಾಜೂಭಾಯ್ ರೂಡಾವಾಲಾ ಹೇಳಿದರು.
ಮೈಸೂರಿನ ಅರಮನೆಯ ಮುಂಭಾಗ 9ನೇ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವಕರೇ ಹೆಚ್ಚು ಸಿನಿಮಾಗಳನ್ನು ನೋಡುತ್ತಿದ್ದು, ಸಿನಿಮಾ ಒಂದು ಮಾಧ್ಯಮ ರೀತಿ ಬೆಳೆಯುತ್ತಿದೆ. ಆದ್ದರಿಂದ ಹೆಚ್ಚು ಒಳ್ಳೆಯ ಚಿತ್ರಗಳು ಬಂದರೆ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ ಎಂದ ರಾಜ್ಯಪಾಲರು, ಪ್ರತಿಯೊಬ್ಬ ನಿರ್ದೇಶಕನಿಗೂ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಳ್ಳಬೇಕು ಎಂಬ ಕನಸಿರುತ್ತದೆ, ಅದಕ್ಕೆ ಸಹಕರಿಸುವ ನಿಟ್ಟಿನಲ್ಲಿ ಸರಕಾರ ಪ್ರಸ್ತುತ ಉತ್ತಮ ಪ್ರಶಸ್ತಿಗಳಿಗೆ ನೀಡುತ್ತಿರುವ 10 ಲಕ್ಷ ರೂ. ಬದಲಾಗಿ 50 ಲಕ್ಷಕ್ಕೆ ಏರಿಕೆ ಮಾಡಬೇಕು ಎಂದು ರಾಜ್ಯಪಾಲ ವಜುಬಾಯಿ ರುಢಾಬಾಯಿವಾಲಾ ಸಲಹೆ ನೀಡಿದರು.
ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆಯ ಮುಂಭಾಗದ ಭವ್ಯ ವೇದಿಕೆಯಲ್ಲಿ 9ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ತೆರೆಕಂಡಿದ್ದು, ಫಾದರ್ಸ್ ವಾಲ್ ಚಿತ್ರವೂ ಅತ್ಯುತ್ತಮ ಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಕಳೆದ 7 ದಿನಗಳಿಂದ ಬೆಂಗಳೂರು ಮತ್ತು ಮೈಸೂರಿನಲ್ಲಿ ಒಟ್ಟು 18 ವಿಭಾಗಗಳಲ್ಲಿ 240 ಚಿತ್ರಗಳು ಪ್ರದರ್ಶನ ಕಂಡಿದ್ದು, ಕನ್ನಡದ 40 ಚಿತ್ರಗಳೂ ಸೇರಿದವು. ಈ ಪೈಕಿ ನಾಲ್ಕು ವಿಭಾಗಗಳಲ್ಲಿ ಒಟ್ಟು 10 ಪ್ರಶಸ್ತಿಗಳನ್ನು ಇಂದು ರಾಜ್ಯಪಾಲ ವಾಜೂಭಾಯಿ ರೂಡಾವಾಲಾ ಪ್ರಶಸ್ತಿ ಪ್ರಧಾನ ಮಾಡಿದರು.
ಸಿನಿಮೋತ್ಸವದ ಅತ್ಯುತ್ತಮ ಚಿತ್ರವಾಗಿ ಫಾದರ್ ವಾಲ್ ಚಿತ್ರ ಪ್ರಶಸ್ತಿಯನ್ನು ಪಡೆದರೆ, ಫಾದರ್ ವೇಲ್ ಕಿರ್ಗಿಸ್ತಾನ್ ದೇಶದ ಚಿತ್ರವಾಗಿ ಏಷ್ಯಿಯನ್ ಸಿನಿಮಾ ವಿಭಾಗದ ಅತ್ಯುತ್ತಮ ಚಿತ್ರವೆಂದು ಪ್ರಶಸ್ತಿ ಪಡೆಯಿತು. ಅತ್ಯುತ್ತಮ ಭಾರತೀಯ ಚಿತ್ರವಾಗಿ ಅನನ್ಯ ಕಾಸರವಳ್ಳಿ ನಿರ್ದೇಶನದ ಕನ್ನಡದ ಹರಿಕಥಾ ಪ್ರಸಂಗ ಚಿತ್ರ ಪ್ರಶಸ್ತಿಯನ್ನು ಪಡೆಯಿತು.
ಲಾತೇ ಜೋಶಿ ಹಾಗೂ ಕಾದು ಪುಕ್ಕುನ ನೀರಮ್ ಚಿತ್ರಗಳು ವಿಶೇಷ ಜ್ಯೂರಿ ಪ್ರಶಸ್ತಿಯನ್ನು ಪಡೆಯಿತು. ಪಿ.ಕೆ.ನಾಯರ್ ನೆನಪಿನ ಪ್ರಶಸ್ತಿಯನ್ನು ಲೇಡಿ ಆಫ್ ದಿ ಲೇಕ್ ಚಿತ್ರ ಪಡೆದಿದ್ದು, ಕನ್ನಡ ವಿಭಾಗದ ಸ್ಪರ್ಧೆಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ಪ್ರಶಸ್ತಿ ಪ್ರದಾನಿಸಲಾಯಿತು. ಕನ್ನಡದ ಅತ್ಯುತ್ತಮ ಚಿತ್ರವಾಗಿ ರಾಮ ರಾಮಾ ರೇ, ಎರಡನೇ ಅತ್ಯುತ್ತಮ ಚಿತ್ರವಾಗಿ ಪಲ್ಲಟ, ಮೂರನೆ ಅತ್ಯುತ್ತಮ ಚಿತ್ರವಾಗಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರಕ್ಕೆ ಪ್ರಶಸ್ತಿ ಲಭಿಸಿತು.
ವಿಶೇಷ ಜ್ಯೂರಿ ಚಿತ್ರವಾಗಿ ಉಪ್ಪಿನ ಕಾಗದ ಚಿತ್ರಕ್ಕೆ ಪ್ರಶಸ್ತಿ ಲಭಿಸಿತು. ಸಿನಿಮೋತ್ಸವದ ಜನಪ್ರಿಯ ಕನ್ನಡ ಚಿತ್ರವಾಗಿ ಪ್ರಥಮ ಜನಪ್ರಿಯ ಚಿತ್ರವಾಗಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-2, ದ್ವೀತಿಯ ಜನಪ್ರಿಯ ಚಿತ್ರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಜಗ್ಗುದಾದ, ತೃತೀಯ ಜನಪ್ರಿಯ ಚಿತ್ರವಾಗಿ ಪವರ್ ಸ್ಟಾರ್ ಪುನಿತ್ರಾಜ್ಕುಮಾರ್ ಅಭಿನಯದ ದೊಡ್ಮನೆ ಹುಡ್ಗ ಚಿತ್ರಕ್ಕೆ ಪ್ರಶಸ್ತಿ ಲಭಿಸಿತು.