News Kannada
Monday, January 30 2023

ಮನರಂಜನೆ

ಕೋಸ್ಟಲ್ ವುಡ್ಡಿಗೆ ಈ ಬಾರಿಯಾದರೂ ಶುಕ್ರದೆಸೆ ಶುರುವಾಗಬಹುದೇ

Photo Credit :

ಕೋಸ್ಟಲ್ ವುಡ್ಡಿಗೆ ಈ ಬಾರಿಯಾದರೂ ಶುಕ್ರದೆಸೆ ಶುರುವಾಗಬಹುದೇ

ಕೋಸ್ಟಲ್ ವುಡ್ಡಿನಲ್ಲಿ ಒಂದು ರೀತಿಯಲ್ಲಿ ಸಿನಿಮಾ ಪರ್ವ ಶುರುವಾಗಿದೆಯೆಂದೇ ಹೇಳಬಹುದು. ಒಂದೆರಡು ಚಿತ್ರಗಳನ್ನು ಮಾಡಿ ಸೋಲು-ಗೆಲುವಿನ ರುಚಿಯನ್ನು ಕಂಡ ಘಟಾನುಘಟಿಗಳು ಒಬ್ಬರ ಹಿಂದೆ ಒಬ್ಬರಂತೆ ಅಖಾಡಕ್ಕಿಳಿದಿದ್ದಾರೆ. ದೇವದಾಸ್ ಕಾಪಿಕಾಡ್ ಅವರ ‘ಅರೆಮರ್ಲೆರ್’, ರಾಜೇಶ್ ಬ್ರಹ್ಮಾವರ ಅವರ ‘ಕಟಪಾಡಿ ಕಟ್ಟಪ್ಪ’, ಪಿಲಿಬೈಲ್ ತಂಡದ ‘ಮೈ ನೇಮ್ ಈಸ್ ಅಣ್ಣಪ್ಪ’, ಸೂರಜ್ ಶೆಟ್ಟರ ‘ಇಂಗ್ಲೀಷ್’, ರಂಜಿತ್ ಸುವರ್ಣರ ‘ಉಮಿಲ್’ ಹಾಗೂ ಒಂದಷ್ಟು ಹೆಸರು ನಿಕ್ಕಿಯಾಗದ ಸಿನಿಮಾಗಳು. ಇವುಗಳ ಜೊತೆಯಲ್ಲಿ ಕಳೆದ ವರ್ಷ ಚಿತ್ರೀಕರಣವಾಗಿ ಬಿಡುಗಡೆಗೆ ಕಾದಿರುವ ಏಸ, ಪತ್ತನಾಜೆ, ಅರ್ಜುನ್ ವೆಡ್ಸ್ ಅಮೃತಾ, ಅಂಬರ್ ಕ್ಯಾಟರರ್ಸ್, ಮದಿಪು, ಚಾಪ್ಟರ್ ಪ್ರೇಕ್ಷಕನಲ್ಲಿ ನಿರೀಕ್ಷೆಯ ಕಾವನ್ನು ಹೆಚ್ಚಿಸಿವೆ. ಪಿಲಿಬೈಲ್ ಯಮುನಕ್ಕಳ ಯಶಸ್ಸಿನಿಂದಾಗಿ ಒಂದಷ್ಟು ಮಂದಿ ಸಿನಿಮಾಗಳನ್ನು ಮಾಡಲು ಧೈರ್ಯ ತೋರಿರುವುದು ಸ್ವಾಗತಾರ್ಹ.    

ಕಳೆದ ವರುಷ ಬಿಡುಗಡೆಯಾದ ಸಿನಿಮಾಗಳಲ್ಲಿ ವರುಷದ ಕೊನೆಗೆ ಬಿಡುಗಡೆಯಾದ ಯಮುನಕ್ಕ ಸಿನಿಮಾ ಹಣ ಮಾಡಿತೇ ಹೊರತು ಉಳಿದದ್ದೆಲ್ಲಾ ತೋಪು ಸಿನಿಮಾಗಳು. ಹೆಚ್ಚಾಗಿ ಎಲ್ಲಾ ನಿರ್ದೇಶಕರು ಕಥೆಯಿಲ್ಲದ ಬರಿಯ ಕಾಮಿಡಿಗೆ ಒತ್ತು ನೀಡಿದರೆ ಹೊರತು ಯಾರೂ ಕಥೆಯ ಬಗ್ಗೆ ಯೋಚನೆ ಮಾಡಲೇ ಇಲ್ಲ. ಬಹುಷ ಸ್ಕ್ರಿಪ್ಟಿಗೆ ಪ್ರಾಮುಖ್ಯತೆ ಕೊಡದ ಚಿತ್ರರಂಗವೆಂದರೆ ಅದು ನಮ್ಮದೇ ಕೋಸ್ಟಲ್ ವುಡ್ ಇರಬೇಕು. ಹಾಗಂತ ಎಲ್ಲಾ ಸಿನಿಮಾಗಳನ್ನು ತಳ್ಳಿ ಹಾಕುವಂತಿಲ್ಲ. ಆದರೆ ಹೆಚ್ಚಿನವು ಬರಿ ಕಾಮಿಡಿ ಮಾಡುತ್ತಾ ‘ಮರ್ಕ ಸಂಕಟಕ್ಕೆ’ ಬಂದ ಸಿನಿಮಾಗಳು.ಇಲ್ಲೀಗ ದೊಂಬರಾಟದ ಬಜೆಟ್ಟಿನಲ್ಲಿ ಕುಡ್ಲಕೆಫೆ ಯಂತಹ ಪ್ರಯೋಗಗಳು ಹೆಚ್ಚಾಗಬೇಕು, ಚಾಲಿಪೋಲಿಲು, ಚಂಡಿಕೋರಿಯಂತಹ ಕಮರ್ಷಿಯಲ್ಲುಗಳು ಪ್ರೇಕ್ಷಕನನ್ನು ಹಿಡಿದಿಡಬೇಕು, ಯಮುನಕ್ಕಳಂತಹ ಕಾಮಿಡಿ ಪೀಸುಗಳೂ ಇರಬೇಕು. ಹೀರೋಯಿಸಂ, ಓವರ್ ಬಿಲ್ಡಪ್ಪುಗಳಿಂದ ಮುಕ್ತವಾಗಿ ಗಟ್ಟಿ ಕಥೆಯಿಂದ ತುಳುಚಿತ್ರರಂಗವನ್ನು ಉಳಿಸುವಂತಹ ಸಿನಿಮಾಗಳು ಬೇಕು. ‘ಒರಿಯರ್ದೊರಿ ಅಸಲ್’ ತುಳುಚಿತ್ರರಂಗವನ್ನು ಪುನರ್ ನಿರ್ಮಾಣ ಮಾಡಿದಂತೆ ಈಗ ಚಿತ್ರರಂಗವನ್ನು ಉಳಿಸುವ ಸಿನಿಮಾವೊಂದು ಬರಬೇಕು.

ಬರಿಯ ಜಾತಿ ನೋಡಿ ಹಣ ಹಾಕುವ ನಿರ್ಮಾಪಕರಿಗಿಂತ ಪ್ರತಿಭೆ ನೋಡಿ ಹಣ ಹಾಕುವ ನಿರ್ಮಾಪಕರು ಹುಟ್ಟಬೇಕು. ಅಸಿಸ್ಟೆಂಟ್,ಅಸೋಸಿಯೇಟ್ ಆಗಿ ದುಡಿದ ಅನುಭವದ ಜೊತೆಗೆ ಕಥೆ, ಚಿತ್ರಕಥೆ ಕಟ್ಟುವ ಪ್ರತಿಭೆಯೂ ಇರಬೇಕು. ಪೆನ್ನು ಹಿಡಿಯುವವರೆಲ್ಲರೂ ಸ್ಕ್ರಿಪ್ಟನ್ನು ಬರೆಯಲು ಸಾಧ್ಯವಿಲ್ಲ. ಎಲ್ಲವನ್ನೂ ನಾನೇ ಮಾಡುತ್ತೇನೆಂಬ ಹುಂಬತನದಿಂದ ಸಿನಿಮಾವನ್ನು ಗೆಲ್ಲಲು ಆಗದು. ಆಯಾ ಕೆಲಸಗಳಿಗೆ ಪರಿಣಿತರನ್ನು ನೇಮಿಸಿ ಅವರನ್ನು ದುಡಿಸಿಕೊಳ್ಳಿ ಅಷ್ಟೇ ಮುಖ್ಯವಾಗಿ ಅವರಿಗೆ ತಕ್ಕುದಾದ ಸಂಭಾವನೆಯನ್ನೂ ನೀಡಿ ಗೌರವಿಸಿ. ಅಮಾಯಕರನ್ನು ನಿಮ್ಮ ತೀಟೆಗೆ ಬಳಸಿಕೊಳ್ಳಬೇಡಿ. ಮುಂಚೆ ನೀವೇಷ್ಟೇ ಸಿನಿಮಾಗಳನ್ನು ಮಾಡಿದ್ದರೂ ಹೊಸ ಸಿನಿಮಾ ನಿಮಗೂ ಹೊಸತೇ ಆಗಿರುವುದರಿಂದ ಬದಲಾಗುತ್ತಿರುವ ಜನರೇಷನ್ ನೊಂದಿಗೆ ಬದಲಾಗಿ. ಟಿವಿ ಷೋಗಳಲ್ಲಿ ಸಣ್ಣಪುಟ್ಟ ಹಾಸ್ಯ ಪ್ರಹಸನಗಳನ್ನು ಮಾಡಿದವರು ಮಾತ್ರ ಕಲಾವಿದರಲ್ಲ, ನೀನಾಸಂ, ರಂಗಾಯಣಗಳಲ್ಲಿ ದುಡಿದ ಅದೆಷ್ಟೋ ಪ್ರತಿಭಾ ಪರ್ವತಗಳಿವೆ ಅವರಿಗೂ ಅವಕಾಶ ನೀಡಿ ತುಳುಚಿತ್ರರಂಗವನ್ನು ಬೆಳೆಸಿ. ವಿಮರ್ಶಕರು ಕಾಸಿಗಾಗಿ ವಕ್ರ ವಿಮರ್ಶೆಗಳನ್ನು ಬರೆಯುವುದನ್ನು ಬಿಟ್ಟು, ನೇರ ಮತ್ತು ದಿಟ್ಟ ವಿಮರ್ಶೆಗಳನ್ನು ಬರೆದು ಕೋಸ್ಟಲ್ ವುಡ್ಡನ್ನು ಬೆಳೆಸುವುದರ ಜೊತೆಯಲ್ಲಿ ನಿಮ್ಮ ಮರ್ಯಾದೆಯನ್ನೂ ಉಳಿಸಿಕೊಳ್ಳಿ. ಹೊಸ ವರ್ಷದಲ್ಲಿ ಹೊಸ ಸಿನಿಮಾಗಳು ತುಳುಚಿತ್ರರಂಗಕ್ಕೆ ಹೊಸ ಕಳೆಯನ್ನು ತರಲಿ. ಗರಿಗೆದರಿರುವ ನಿರೀಕ್ಷೆಗಳು ಠುಸ್ಸಾಗದಿರಲಿ.

See also  ಇಂದು ಗಣೇಶ್, ರಶ್ಮಿಕಾ ಮಂದಣ್ಣ ನಟನೆಯ ‘ಚಮಕ್’ ಚಿತ್ರ ಬಿಡುಗಡೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು