ದಕ್ಷಿಣ ಭಾರತದ ಹೆಸರಾಂತ ನಟಿ ಅಮಲಾ ಪೌಲ್ ಹೆಬ್ಬುಲಿ ಚಿತ್ರದ ಮೂಲಕ ಕಿಚ್ಚ ಸುದೀಪ್ ಗೆ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಈ ನಟಿಗೆ ಬೆಂಗಳೂರು ಅಂದರೆ ಲಾಸ್ ವೇಗಾಸ್ ಇದ್ದ ಹಾಗೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಅಮಲಾ ಪೌಲ್ ಅವರ ಆತ್ಮೀಯ ಸ್ನೇಹಿತರು ನೆಲೆಸಿದ್ದು, ಕನ್ನಡ ಚಿತ್ರಗಳಲ್ಲಿ ನಟಿಸಲು ಇದೇ ಕಾರಣವಾಗಿದ್ದು, ನಾನು ಪದೇ ಪದೇ ಬೆಂಗಳೂರಿಗೆ ಬಂದು ಹೋಗುತ್ತಿದ್ದೆ. ಕೇರಳದ ಕಾನ್ವೆಂಟ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ನಾನು ರಜಾ ದಿನಗಳಲ್ಲಿ ಬೆಂಗಳೂರಿಗೆ ಬರುತ್ತಿದ್ದೆ, ನನಗೆ ಬೆಂಗಳೂರು ಲಾಸ್ ವೇಗಾಸ್ ಇದ್ದಂತೆ ಎಂದು ಹೇಳಿದ್ದಾರೆ.
ನಾನು ಕನ್ನಡದ ಚಿತ್ರದಲ್ಲಿ ಅಭಿನಯಿಸಬೇಕೆಂಬ ಆಸೆ ನನ್ನ ಕೆಲ ಸ್ನೇಹಿತರಿಗೆ ಮೊದಲಿನಿಂದಲೂ ಇತ್ತು. ಹೆಬ್ಬುಲಿ ಚಿತ್ರದ ನಿರ್ದೇಶಕರಾದ ಎಸ್. ಕೃಷ್ಣ ಅವರು ಚಿತ್ರದ ಕುರಿತಂತೆ ನನಗೆ ಮೇಲ್ ಮಾಡಿ, ನನ್ನ ಪಾತ್ರದ ಮಹತ್ವವನ್ನು ತಿಳಿಸಿದ್ದು, ಚಿತ್ರಕಥೆಯನ್ನು ಓದುತ್ತಿದ್ದಂತೆ ನಾನು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ ಎಂದು ಹೆಬ್ಬುಲಿ ಚಿತ್ರದ ಕುರಿತು ತಮ್ಮ ಮನದಾಳದ ಮಾತುಗಳನ್ನಾಡಿದರು.