ಮೈಸೂರು: ಚಾಲೆಂಚಿಂಗ್ ಸ್ಟಾರ್ ದರ್ಶನ ಅವರ 40ನೇ ಹುಟ್ಟುಹಬ್ಬಕ್ಕೆ ವಿಧಾನ ಪರಿಷತ್ ಸದಸ್ಯ ಹಾಗೂ ಚಲನಚಿತ್ರ ನಿರ್ಮಾಪಕ ಸಂದೇಶ ನಾಗರಾಜ್ ಬಳಸುತ್ತಿದ್ದ ದುಬಾರಿ ಬೆಲೆಯ ಪೋರ್ಷ್ ಕಾರನ್ ಉಡುಗೊರೆಯಾಗಿ ನೀಡಿದ್ದಾರೆ.
ಇದೇ ತಿಂಗಳ 16ರಂದು ಚಾಲೆಂಚಿಂಗ್ ಸ್ಟಾರ್ ದರ್ಶನ ತಮ್ಮ 40ನೇ ಹುಟ್ಟುಹಬ್ಬವನ್ನ ಬೆಂಗಳೂರಿನ ತಮ್ಮ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಅದ್ದೂರಿಯಾಗಿ ಆಚರಿಸಿಕೊಂಡಿದರು. ಚೌಕ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಚಾಲೆಂಚಿಂಗ್ ಸ್ಟಾರ್ ದರ್ಶನ ಚಿತ್ರದ ಪ್ರಮೋಷನ್ ಗಾಗಿ ಸಹ ನಟರೊಂದಿಗೆ ಮೈಸೂರಿಗೆ ಆಗಮಿಸಿದ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಚಲನಚಿತ್ರ ನಿರ್ಮಾಪಕ ಸಂದೇಶ ನಾಗರಾಜ ತಾವು ಬಳಸುತ್ತಿದ್ದ 1 ಕೋಟಿ 20 ಲಕ್ಷ ಬೆಲೆ ಬಾಳುವ ಪೋರ್ಷ ಕಾರನ್ನ ಉಡುಗೊರೆಯಾಗಿ ನೀಡಿದ್ದಾರೆ.
ದರ್ಶನ 51ನೇ ಸಿನಿಮಾ ಒಡೆಯರ್:
ನಿರ್ಮಾಪಕ ಹಾಗೂ ವಿಧಾನ ಪರಿಷತ್ ಸದಸ್ಯ ಸಂದೇಶ ನಾಗರಾಜ್ ಅವರ ಸಂದೇಶ ಪ್ರೋಡಕ್ಷನ್ ನಲ್ಲಿ ಮೂಡು ಬರುತ್ತಿರುವ 25ನೇ ಚಿತ್ರ ಒಡೆಯರ್ ಚಿತ್ರದಲ್ಲಿ ಚಾಲೆಂಚಿಂಗ್ ಸ್ಟಾರ್ ದರ್ಶನ ನಾಯಕ ನಟನಾಗಿ ಅಭಿನಯಿಸುತ್ತಿದ್ದು ಅವರ 51ನೇ ಚಿತ್ರ ಇದಾಗಿದೆ. ಈ ಹಿನ್ನಲ್ಲೆಯಲ್ಲಿ ತಮ್ಮ ಮೈಸೂರಿನ ಸಂದೇಶ ದಿಪ್ರೀನ್ಸ್ ಹೋಟೆಲ್ ನಲ್ಲಿ ಇದೇ ತಿಂಗಳ 20ರಂದು ತಾವು ಬಳಸುತ್ತಿದ್ದ ಈ ದುಬಾರಿ ಬೆಲೆಯ ಕಾರನ್ನೆ ಉಡುಗೊರೆಯಾಗಿ ನೀಡಿದ್ದಾರೆ.