News Kannada
Tuesday, November 29 2022

ಮನರಂಜನೆ

ಶಾಸ್ತವಿನಲ್ಲಿ ಹಾಡು ಹಕ್ಕಿಗಳ ಕಲರವ - 1 min read

Photo Credit :

ಶಾಸ್ತವಿನಲ್ಲಿ ಹಾಡು ಹಕ್ಕಿಗಳ ಕಲರವ

ಮೂಡುಬಿದಿರೆ: ಬಡಗ ಎಡಪದವು ಶ್ರೀ ಶಾಸ್ತವು ಭೂತನಾಥೇಶ್ವರ ಟ್ರಸ್ಟ್ ಹಾಗೂ ನಮ್ಮ ಟಿ.ವಿ ಸಹಯೋಗದಲ್ಲಿ ನಡೆದ ನಮ್ಮ ಸೂಪರ್ ಸಿಂಗರ್, ಗಾಯನ ಸ್ಪರ್ಧೆಯ ಫೈನಲ್ಗೆ ಮುನ್ನ ಟಾಪ್ 11 ಹಾಡುಗಾರರೊಂದಿಗೆ ಅವರ ಕುಟುಂಬದ ಸದಸ್ಯರು ಸಾಥ್ ನೀಡಿ, ಹಾಡಿದರು. ಫೈನಲ್ ಗೇರಿದ ಯುವ ಗಾಯಕರನ್ನು ಅವರ ಕುಟುಂಬದವರು ಯಾವ ರೀತಿ ಪ್ರೋತ್ಸಾಹಿಸುತ್ತಾರೆ ಎನ್ನುವುದಕ್ಕೆ ಸ್ಪರ್ಧೆಯ `ಫ್ಯಾಮಿಲಿ ರೌಂಡ್ಸ್’ ಸಾಕ್ಷಿಯಾಯಿತು.

ಶ್ರೀಕ್ಷೇತ್ರ ಶಾಸ್ತವಿನಲ್ಲಿ ಭಾನುವಾರ ನಡೆದ ಸೂಪರ್ ಸಿಂಗರ್ ರಿಯಾಲಿಟಿ ಶೋನಲ್ಲಿ ಫೈನಲ್ ಸ್ಪರ್ಧಿಗಳಾದ ಐರಾ ಆಚಾರ್ಯ ಉಡುಪಿ, ಲಹರಿ ಕೋಟ್ಯಾನ್ ಪುತ್ತೂರು, ನಿಶಾನ್ ರೈ ಕುಲಶೇಖರ, ವಿನುಶ್ ಭಾರದ್ವಾಜ್ ಕುಂದಾಪುರ, ಕೀರ್ತನ್ ಹೊಳ್ಳ ಮಂಗಳೂರು, ಚೇತನಾ ಬಿಜೈ, ವೈಷ್ಣವಿ ಕಿಣಿ ಮಂಗಳೂರು, ವೈಷ್ಣವಿ ಆರ್ ಮಣಿಪಾಲ, ನಿಹಾಲ್ ತಾವ್ರೋ ಮೂಡುಬಿದಿರೆ, ರಜತ್ ಮಯ್ಯ ಉಜಿರೆ, ಪ್ರಜ್ಞಾ ಅಡಿಗ ಉಡುಪಿ, ಚೇತನಾ ಬಿಜೈ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಾಡು ಹಾಡಿ ಮೋಡಿ ಮಾಡಿದರು. ತಮ್ಮ ಅಮ್ಮ, ಅಪ್ಪ, ಸಹೋದರ, ಸಹೋದರಿ ಸಹಿತ ಕುಟುಂಬದ ಸದಸ್ಯರೊಂದಿಗೆ ಸೇರಿ ಹಾಡು ಹಾಡಿದರು.

ಕನ್ನಡ ಚಿತ್ರರಂಗ ಖ್ಯಾತ ಸಂಗೀತ ನಿರ್ದೇಶಕರಾದ ವಿ.ಮನೋಹರ್, ಗುರುಕಿರಣ್, ಶ್ರೀ ಶಾಸ್ತವು ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ್ ವಿಠಲ್ ಶೆಟ್ಟಿ, ರಾಜಗೋಪಾಲ್, ಕಿಟ್ಟು, ಗಾಯಕಿ ಅಲಕಾ ಸುಬ್ರಹ್ಮಣ್ಯ ತೀರ್ಪುಗಾರರಾಗಿ ಸಲಹೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿಜಯನಾಥ್ ವಿಠಲ್ ಶೆಟ್ಟಿ ಅವರ ತಾಯಿ ಪ್ರೇಮಲತಾ ಶೆಟ್ಟಿ, ಬಿಜೆಪಿ ಹಿರಿಯ ಮುಖಂಡ ಜಗದೀಶ್ ಅಧಿಕಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.  ವಿಜೆ ಸೌಜನ್ಯಾ ಕಾರ್ಯಕ್ರಮ ನಿರೂಪಿಸಿದರು.

See also  ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಬರಬೇಕು: ದರ್ಶನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು