ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ “ವೀಕೆಂಡ್ ವಿತ್ ರಮೇಶ್” ಸೀಸನ್ 3 ಪ್ರಾರಂಭವಾಗಲಿದ್ದು, ಜೀ ಕನ್ನಡ ವಾಹಿನಿಯ ಕಾರ್ಯಕ್ರಮದ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರು ಯಾವ ಯಾವ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ವೀಕ್ಷಕರ ಕುತೂಹಲಕ್ಕೆ ಬ್ರೇಕ್ ಹಾಕಿದ್ದಾರೆ.
ಈ ಬಾರಿಯ ಸೀಸನ್ ಕೇವಲ ಸಿನಿಮಾರಂಗಕ್ಕೆ ಸೀಮಿತವಾಗಿರದೆ ಸಮಾಜವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅಪೂರ್ವ ವ್ಯಕ್ತಿಗಳ ಸಮ್ಮಿಲನವಾಗಲಿದ್ದು, ರಾಜಕೀಯ, ಕ್ರೀಡೆ, ಸಿನಿಮಾ ಮತ್ತು ಕಾನೂನು ಕ್ಷೇತ್ರಕ್ಕೆ ಸಂಬಂಧಿಸಿದ ಗಣ್ಯಾತಿ ಗಣ್ಯರು ಸೀಸನ್ 3ಯಲ್ಲಿ ಬಾಗವಹಿಸಲಿದ್ದಾರೆ. ಸೀಸನ್ 2 ಸರಣಿ ಸಂಪೂರ್ಣ ಸಿನಿಮಾ ಮಯವಾಗಿದ್ದ ಹಿನ್ನಲೆಯಲ್ಲಿ ಸೀಸನ್ 3ಯಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರನ್ನೂ ಕರೆಸುವಂತೆ ಪ್ರೇಕ್ಷಕರಿಂದ ವ್ಯಾಪಕ ಒತ್ತಾಯ ಕೇಳಿಬಂದಿದ್ದರಿಂದ ಈ ಬಾರಿಯ ಸೀಸನ್ 3 ಸರಣಿ ಹಲವು ಕ್ಷೇತ್ರಗಳ ಗಣ್ಯರಿಂದ ಕೂಡಿರಲಿದೆ ಎಂದು ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ.
ಸೀಸನ್ 3ಯಲ್ಲಿ ಪಾಲ್ಗೊಳ್ಳಲಿರುವ ಗಣ್ಯರ ಪಟ್ಟಿ:
ಗಂಗಾವತಿ ಬಿಚಿ ಎಂದೇ ಖ್ಯಾತರಾದ ಹಾಸ್ಯಕಲಾವಿದ ಪ್ರಾಣೇಶ್
ಮೈಸೂರು ಎಸ್ ಪಿ ರವಿ ಚೆನ್ನಣ್ಣನವರ್
ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ
ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ
ಖ್ಯಾತ ನಟ ಪ್ರಕಾಶ್ ರೈ
ನಟ ಜಗ್ಗೇಶ್
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ
ಸಂಗೀತ ನಿರ್ದೇಶಕ ಹರಿಕೃಷ್ಣ
ಖ್ಯಾತ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ
ಖ್ಯಾತ ಗೀತ ರಚನೆಕಾರ ಜಯಂತ್ ಕಾಯ್ಕಿಣಿ
ನಟಿ ರಮ್ಯಾ
ಖ್ಯಾತ ನಟಿ ಮಾಲಾಶ್ರೀ
ಭಾರತಿ ವಿಷ್ಣುವರ್ಧನ್
ಖ್ಯಾತ ಹಿರಿಯ ನಿರ್ದೇಶಕ ಕಾಶೀನಾಥ್
ಖ್ಯಾತ ಹಿರಿಯ ನಟಿ ಅರುಂಧತಿ ನಾಗ್